ಚೆಯ್ಯಂಡಾಣೆ, ಆ. ೫: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟ ಅರಪಟ್ಟು, ಪೊದವಾಡ, ಎಡಪಾಲ, ಕರಡ, ಚೇಲವಾರ, ನರಿಯಂದಡ ಹಾಗೂ ಕೊಕೇರಿ ಗ್ರಾಮಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಅಸ್ಸಾಂ ಹಾಗೂ ಹೊರ ರಾಜ್ಯಗಳ ಕಾರ್ಮಿಕರ ವಿವರಗಳನ್ನು ಸಂಗ್ರಹಿಸುವ ಸಲುವಾಗಿ ತಾ. ೮ ರಂದು ಪೂರ್ವಾಹ್ನ ೧೧ ಗÀಂಟೆಗೆ ಚೆಯ್ಯಂಡಾಣೆ ಮಹಿಳಾ ಸಮಾಜದಲ್ಲಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಲೈನ್‌ಮನೆಗಳ ಮಾಲೀಕರ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ಕರೆ ತರುವ ದಲ್ಲಾಳಿಗಳನ್ನೊಳಗೊಂಡು ಸಭೆ ಕರೆಯಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.