ಸೋಮವಾರಪೇಟೆ,ಆ.೫: ಕುರುಹಿನಶೆಟ್ಟಿ ಸಮಾಜದ ಯುವಕ ಸಂಘದ ಸಭೆ ಅಧ್ಯಕ್ಷ ಬಿ.ಜಿ. ರವಿ ಅಧ್ಯಕ್ಷತೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಸಕ್ತ ಸಾಲಿನ ಶ್ರೀ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಆಚರಣಾ ಸಮಿತಿ ಅಧ್ಯಕ್ಷರಾಗಿ ರವಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್. ಮಂಜುನಾಥ್, ಉಪಾಧ್ಯಕ್ಷರಾಗಿ ಬಿ.ಎಸ್. ಯತೀಶ್ ಖಜಾಂಚಿಯಾಗಿ ಬಿ.ಎಂ. ರಾಮ್‌ಪ್ರಸಾದ್, ನಿರ್ದೇಶಕರುಗಳಾಗಿ ಬಿ.ಕೆ. ಉದಯಕುಮಾರ್, ಬಿ.ಎಂ. ಶ್ರೀಧರ್, ಪೂರ್ಣೇಶ್, ಬಿ.ಕೆ. ಚಂದ್ರ, ಬಿ.ಆರ್. ಶುಭಕರ, ಬಿ.ಸಿ. ವೆಂಕಟೇಶ್ ಹಾಗೂ ಸತ್ಯೇಂದ್ರ ಆಯ್ಕೆಯಾದರು.