ಕುಶಾಲನಗರ, ಆ. ೫: ಕುಶಾಲನಗರದಲ್ಲಿದ್ದ ಮಾನಸಿಕ ಅಸ್ವಸ್ಥೆಯನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೈಸೂರಿನ ಶರಣ್ಯ ಟ್ರಸ್ಟ್ಗೆ ಹಸ್ತಾಂತರಿಸುವ ಮೂಲಕ ಮಹಿಳೆಯ ಆರೈಕೆಗೆ ಸಹಕಾರ ನೀಡಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದ ಮಹಿಳೆಯನ್ನು ಕುಶಾಲನಗರ ಪಂಚಾಯಿತಿ ಆರೋಗ್ಯಾಧಿಕಾರಿ ಉದಯ್‌ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು, ಮಹಿಳೆಯನ್ನು ಸ್ವಚ್ಛಗೊಳಸಿ ಹೊಸ ಉಡುಗೆಯನ್ನು ತೊಡಿಸಿ ನಂತರ ವೈದ್ಯರ ಚಿಕಿತ್ಸೆಗೆ ಒಳಪಡಿಸಿ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಸಹಕಾರದಿಂದ ಮಹಿಳೆಯನ್ನು ಟ್ರಸ್ಟ್ಗೆ ಒಪ್ಪಿಸಲಾಯಿತು.