ಮಡಿಕೇರಿ, ಆ. ೫: ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾರತ್‌ಮಾತಾ ಪೂಜನಾ ಹಾಗೂ ಮನೆ ಮೇಲೆ ಭಗವಧ್ವಜ ಕಾರ್ಯಕ್ರಮ ಕಡಗದಾಳು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮದ ಪ್ರತಿ ಮನೆಯಲ್ಲಿಯೂ ಭಾರತ್ ಮಾತಾ ಪೂಜಾನ ಹಾಗೂ ಮನೆಯ ಮೇಲೆ ಭಗವಧ್ವಜ ಅಳವಡಿಸುವ ಕಾರ್ಯಕ್ಕೆ ವೇದಿಕೆಯ ಕ್ಷೇತ್ರಿಯ ಪ್ರಮುಖ್ ಜಗದೀಶ್ ಕಾರಂತ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ದೇಶಾಭಿಮಾನದೊಂದಿಗೆ ಧರ್ಮದ ಮೇಲೆ ಅಭಿಯಾನ ಹೊಂದಬೇಕು. ಹಿಂದೂಗಳ ರಕ್ಷಣೆಗೆ ಬದ್ಧರಾಗಿರಬೇಕು. ಭವ್ಯ ಭಾರತ ಕಟ್ಟಲು ಯುವಕರು ಮುಂದೆ ಬರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂತ ಸಹ ಸಂಯೋಜಕ ಲೋಹಿತ್ ಅರಸ್, ಮಂಗಳೂರು ವಿಭಾಗ ಸಂಚಾಲಕ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.