*ಗೋಣೀಕೊಪ್ಪ:, ಆ. ೫: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಬೃಹತ್ ವಾಹನ ಜಾಥ ಇದೇ ತಾ. ೮ರಂದು ನಡೆಯಲಿದೆ ಎಂದು ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ ತಿಳಿಸಿದ್ದಾರೆ. ಅಂದು ಬೆಳಿಗ್ಗೆ ೧೦ ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಿAದ ಪೊನ್ನಂಪೇಟೆ ಕೊಡವ ಸಮಾಜದವರೆಗೆ ಜಾಥ ನಡೆಯಲಿದೆ.

ನಂತರ ಸಭಾಂಗಣದಲ್ಲಿ ಭಾರತೀಯ ಭೂಸೇನೆ ಮಾಜಿ ಹವಾಲ್ದಾರ್ ಐನಂಡ ಕೆ. ಮಂದಣ್ಣ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಭಾಷಣಗಾರರಾಗಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಯೋಜಕ ಸತೀಶ್ ದಾವಣಗೆರೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.