ಕುಶಾಲನಗರ, ಆ. ೪: ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹೋಮ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಕಳೆದ ೧೬ ವರ್ಷದಿಂದ ರಿಜಿಡ್ ಗ್ರೂಪ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಶನಿವಾರ ಶನಿ ಕಥಾ ಶ್ರಾವಣದ ಜೊತೆಗೆ ಮೃತ್ಯುಂಜಯ ಹೋಮ, ನವಗ್ರಹ ಹೋಮ, ಕನ್ನಿಕಾಪರಮೇಶ್ವರಿ ಹೋಮ ಮತ್ತು ಶನಿದೇವರ ವಿಶೇಷ ಪೂಜೆಯನ್ನು ಅರ್ಚಕ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ನಡೆಸಲಾಯಿತು.

ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್. ಉದಯಕುಮಾರ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ರಿಜಿಡ್ ಗ್ರೂಪ್‌ನ ಪ್ರಮುಖರಾದ ಕೆ.ಎಸ್. ನಾಗೇಶ್, ವಿ.ವಿ. ತಿಲಕ್, ಎನ್.ವಿ. ಬಾಬು, ಎ.ಎಸ್. ಕುಮಾರ್, ನಾಗಪ್ರವೀಣ್, ಎ.ವಿ. ಸಂತೋಷ್, ಪಿ.ಕೆ. ರಘು, ವಿ.ಆರ್. ಮಂಜುನಾಥ್, ಎಸ್.ಎಂ. ನಾಗೇಂದ್ರ, ಎಸ್.ಎಸ್. ಮನೋಹರ್, ಗಾಯತ್ರಿ ಬಾಬು, ಶಾಲಿನಿ ನಾಗೇಶ್, ಚಿತ್ರ ರಮೇಶ್ ಮತ್ತಿತರರು ಇದ್ದರು.