ಗೋಣಿಕೊಪ್ಪ ವರದಿ, ಆ. ೩: ಕಳತ್ಮಾಡು ಲಯನ್ಸ್ ಪ್ರೌಢಶಾಲೆಯಲ್ಲಿ ಲಯನ್ಸ್ ಲಿಯೋ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆಯಾಗಿ ಅಲ್ಲುಮಾಡ ನಾಟ್ಯಾ ದೇಚಕ್ಕ, ಕಾರ್ಯದರ್ಶಿಯಾಗಿ ಕೆ.ಎ. ಮನಿಷಾ ಮುತ್ತಮ್ಮ, ಖಜಾಂಚಿಯಾಗಿ ಸಿ.ಪಿ. ಪ್ರಣವ್ ಪದಗ್ರಹಣ ಸ್ವೀಕರಿಸಿದರು.

ಲಯನ್ಸ್ ಕ್ಲಬ್ ಪ್ರಾಂತ ಪಾಲಕ ಮೆಲ್ವಿನ್ ಡಿಸೋಜಾ ಪದಗ್ರಹಣ ಬೋಧಿಸಿದರು. ಹೆಚ್ಚು ಶ್ರಮಪಟ್ಟು ಕ್ಲಬ್ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅನ್ವಿಕಾ, ಮಾನ್ಯ, ಗೌರವ್, ವೃಶಿಕ, ಬಿ.ಪಿ ರಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಜಮ್ಮಡ ಎಸ್. ಮಾದಪ್ಪ, ಕಾರ್ಯದರ್ಶಿ ಧನು ಉತ್ತಯ್ಯ, ಖಜಾಂಚಿ ಶರತ್ ದೇವಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ಲೊಯೋ ಕ್ಲಬ್ ಸಲಹೆಗಾರ ಅಲ್ಲುಮಾಡ ಸುನಿಲ್ ಇದ್ದರು.