ನಾಪೋಕ್ಲು, ಆ. ೩: ಸಮೀಪದ ಕೊಟ್ಟಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಡಿಕೇರಿ ಮುಖ್ಯರಸ್ತೆಯು ಹೊಂಡಗುAಡಿಗಳಿAದ ಕೂಡಿದ್ದು ವಾಹನ ಚಾಲಕರು, ಸಾರ್ವಜನಿಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿ-ಮಂಗಳೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನತ್ತ ತೆರಳುವ ಭಾರೀ ವಾಹನಗಳು ಮೂರ್ನಾಡು, ಕೊಟ್ಟಮುಡಿ, ಬೆಟ್ಟಗೇರಿ ಮಾರ್ಗವಾಗಿ ಸಂಚರಿಸುತ್ತಿವೆ. ವಾಹನಗಳ ಒತ್ತಡದಿಂದ ಕೊಟ್ಟಮುಡಿಯ ಸರ್ಕಾರಿ ಶಾಲೆಯ ಬಳಿ ಭಾರೀ ಗುಂಡಿ ಕಾಣಿಸಿಕೊಂಡಿದೆ. ಇದರಿಂದ ವಾಹನ ಚಾಲಕರಿಗೆ ತೀವ್ರ ತೊಂದರೆ ಯಾಗುತ್ತಿದೆ. ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನ ದೊರೆತಿಲ್ಲ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಂಬAಧಪಟ್ಟ ಇಲಾಖೆ ತಕ್ಷಣವೇ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಪಡಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ರಸ್ತೆ ಸರಿಪಡಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ಸತೀಶ್ ಭರವಸೆ ನೀಡಿದ್ದಾರೆ. - ದುಗ್ಗಳ ಸದಾನಂದ