ಮಡಿಕೇರಿ, ಆ. ೩: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು, ಶಕ್ತಿಯಲ್ಲಿ ಪ್ರಕಟಗೊಂಡ ನಾಲ್ಕು ವರದಿಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ.

ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಮರದ ನೆರಳು, ಮನೆಯ ಜಗುಲಿ ಮಕ್ಕಳ ಪಾಠಶಾಲೆ' ವರದಿಗೆ ಹೆಚ್.ಕೆ.ಜಗದೀಶ್, ಪಂದ್ಯAಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ನೆಟ್‌ವರ್ಕ್ಗಾಗಿ ಮರವೇರುತ್ತಿರುವ ವಿದ್ಯಾರ್ಥಿಗಳು' ವರದಿಗೆ ಕಿಶೋರ್ ಶೆಟ್ಟಿ, ಕೋವರ್‌ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಕಳೆದು ಹೋದವಳು ಏಳು ವರ್ಷಗಳ ನಂತರ ಕೈಹಿಡಿದು ಕರೆದೊಯ್ದರು' ವರದಿಗೆ ಚಂದನ್ ನಂದರಬೆಟ್ಟು, ಸಂಘದ ಸದಸ್ಯರಾಗಿದ್ದ ಎಸ್.ಎ. ಮುರುಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ : ಉನ್ನತ ಉದ್ಯೋಗದಲ್ಲಿದ್ದರೂ ಕೃಷಿಯತ್ತ ಆಸಕ್ತಿ: ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ ಪಡೆದುಕೊಂಡಿದ್ದಾರೆ.

ಸAಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ‘ಕಾಫಿ ನಾಡಲ್ಲಿ ಚಿಗುರಿದ ಮಹಿಳಾ ಫುಟ್ಬಾಲ್ ಕ್ಲಬ್' ವರದಿಗೆ ಕೆ.ಎಂ.ಇಸ್ಮಾಯಿಲ್ ಕಂಡಕೆರೆ, ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ಟಿವಿ೯ ಕ್ಯಾಮರಾಮೆನ್ ನವೀನ್ ಸುವರ್ಣ ‘ಹಸಿರೂರಿಗೆ ಮಂಜಿನ ಸೀರೆ' ವರದಿಗೆ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಕಾಡಾನೆ ಉಪಟಳ, ಜಿಲ್ಲೆಯ ರೈತರು ಹೈರಾಣ'ವರದಿಗೆ ರಘು ಹೆಬ್ಬಾಲೆ ಪಡೆದುಕೊಂಡಿದ್ದಾರೆ.

ಕೈಬುಲೀರ ಪಾರ್ವತಿ ಬೋಪಯ್ಯ ತಂದೆ-ತಾಯಿ ಉತ್ತಯ್ಯ-ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಜಿಲ್ಲೆಯಲ್ಲಿದೆ ಹೆಚ್ಚು ನೈಸರ್ಗಿಕ ಆಕ್ಸಿಜನ್’ ವರದಿಗೆ ಸಣ್ಣುವಂಡ ಕಿಶೋರ್ ನಾಚಪ್ಪ, ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ‘ಕಾಫಿಗೆ ಬೆಸೆದ ಹೈನುಗಾರಿಕೆ ಯಶಸ್ಸು ಕಂಡ ದಂಪತಿ' ವರದಿಗೆ ಹಿರಿಕರ ರವಿ, ಶಕ್ತಿ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ತಮ್ಮ ಹೋಂಸ್ಟೇ ಆಲ್ಫೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿಛಾಯಾಚಿತ್ರ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ‘ಮೋಂಕ್ ಆರ್ಟ್ ಎಟ್ ಟಿಬೇಟಿಯನ್' ಚಿತ್ರಕ್ಕೆ ಪಿ.ವಿ.ಅಕ್ಷಯ್ ತಮ್ಮದಾಗಿಸಿಕೊಂಡಿದ್ದಾರೆ.

ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಸಿಮೆಂಟ್ ಕಂಬದಲ್ಲಿ ಅರಳಿದ ಕಪ್ಪು ಚಿನ್ನ' ವರದಿಗೆ ರೆಜಿತ್ ಕುಮಾರ್ ಗುಹ್ಯ, ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಚಿತ್ತಾರ ಚಾನಲ್‌ನಲ್ಲಿ ಪ್ರಸಾರವಾದ ‘ಮುಕ್ಕೋಡ್ಲುವಿನಲ್ಲಿ ಅಪರೂಪದ ಕೀಟ ಪ್ರಬೇಧ' ವರದಿಗೆ ಸಂತೋಷ್ ರೈ, ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬAಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್‌ನಲ್ಲಿ ಪ್ರಸಾರವಾದ ‘ಯೋಧರ ನಾಡಲ್ಲಿ ಲೋಕಾರ್ಪಣೆ ಯಾಯ್ತು ಪ್ರಥಮ ವಾರ್ ಮ್ಯೂಸಿಯಂ' ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ, ದಿವಂಗತ ಸಣ್ಣುವಂಡ ಎಂ ಚಂಗಪ್ಪ ಅವರ ಹೆಸರಿನಲ್ಲಿ ಕೊಡಗಿನ ಪತ್ರಕರ್ತರು ಸ್ಥಾಪಿಸಿರುವ ಸೇನೆಗೆ ಸಂಬAಧಿಸಿದ ದೃಶ್ಯ ಮಾಧ್ಯಮ ವರದಿಗೆ ದಿಗ್ವಿಜಯ ಚಾನಲ್‌ನಲ್ಲಿ ಪ್ರಸಾರವಾದ ‘ಬಿಪಿನ್ ರಾವತ್ ಕೊಡಗು ನಂಟು’ ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ, ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ. ಸುಬ್ರಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಟಿವಿ೯ ಚಾನಲ್‌ನಲ್ಲಿ ಪ್ರಸಾರವಾದ ‘ಓ ಗೆಳೆಯ ಜೀವದ ಗೆಳೆಯ’ ವರದಿಗೆ ಸುರೇಶ್ ಪಡೆದುಕೊಂಡಿದ್ದಾರೆ.

ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ‘ಪ್ರಕಟವಾದ ಕೊರೊನಾ ವಿರುದ್ಧ ಬುಡಕಟ್ಟು ಅಸ್ತç’ ವರದಿಗೆ ಜಗದೀಶ್ ಜೋಡುಬೀಟಿ, ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಜೆಡಿಎಸ್ ನತ್ತ ಮುತ್ತಪ್ಪ ತಂಡ’ ವರದಿ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಕೊಡಗು ಪೊಲೀಸ್ ಖಜಾನೆಯಲ್ಲಿ ೧೬.೯೬ ಲಕ್ಷ ಲೂಟಿ’ ವರದಿಗೆ ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಜನರಾಗಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ತಾ. ೨೮ ರಂದು ನೀಡಿ ಗೌರವಿಸಲಾಗುವುದು. ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.