ಮಡಿಕೇರಿ, ಆ. ೩: ವೀರಾಜಪೇಟೆ ತಾಲೂಕಿನ ತೆರ್ಮೆಕಾಡು ಪೈಸಾರಿ ತೆರವು ಕಾರ್ಯಾಚರಣೆಗೆ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅಲ್ಲಿನ ನಿವಾಸಿಗಳ ಪರ ವಕಾಲತ್ತು ವಹಿಸಿದ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು, ಪೈಸಾರಿ ತೆರವು ಮೂಲಕ ಜನರನ್ನು ಒಕ್ಕಲೆಬ್ಬಿಸುವ ಯತ್ನವಾಗುತ್ತಿದೆ ಹಾಗೂ ಇನ್ನಿತರ ವಿಚಾರಗಳನ್ನು ಮುಂದಿಟ್ಟು ವಾದ ಮಂಡಿಸಿದ್ದರು.