ಸೋಮವಾರಪೇಟೆ, ಆ. ೩: ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯು ಹೊಂಡಾ ಗುಂಡಿಗಳ ಆಗರವಾಗಿ ವಾಹನ ಚಾಲನೆ ಕಷ್ಟಕರವಾಗಿ ಪರಿಣಮಿ ಸಿದ್ದರೂ ಸಂಬAಧಿಸಿದ ಲೋಕೋಯೋಗಿ ಇಲಾಖೆ ಗಮನ ಹರಿಸುತ್ತಿಲ್ಲ. ಸೋಮವಾರಪೇಟೆ ಪಟ್ಟಣದಿಂದ ಕೊಣನೂರು ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ದರ್ಬಾರ್ ಇದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಲಕ್ಷಾಂತರ ಅನುದಾನ ಬಿಡುಗಡೆಯಾಗುತ್ತಿದ್ದರೂ ವಿನಿಯೋಗವಾಗುತ್ತಿರುವುದು ಕಂಡುಬರುತ್ತಿಲ್ಲ. ಈ ಹಣ ಯಾರ ಪಾಲಾಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಎರಪಾರೆ ಗ್ರಾಮದ ಸಂತೋಷ್, ಕುಮಾರ್, ರಾಮಚಂದ್ರ ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಎಸ್‌ಜೆಎಂ ಶಾಲೆಯ ಮುಂಭಾಗದಿAದ ಹಿಡಿದು ಬಿಎಸ್‌ಎನ್‌ಎಲ್ ಟವರ್, ತಣ್ಣೀರುಹಳ್ಳದ ಸೇತುವೆ ಬಳಿ, ತಣ್ಣೀರುಹಳ್ಳ ಗ್ರಾಮದ ಸಮುದಾಯ ಭವನದ ಮುಂಭಾಗ, ಅಬ್ಬೂರುಕಟ್ಟೆ-ಗೋಣಿಮರೂರು ಅರಣ್ಯದ ನಡುವೆ, ಎರಪಾರೆ ಗ್ರಾಮದ ಬಳಿಯಲ್ಲಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ವಾಗಿದ್ದು, ಹಲವು ವಾಹನಗಳು ಅವಘಡಕ್ಕೆ ಈಡಾಗುತ್ತಿವೆ.
ಕನಿಷ್ಟಪಕ್ಷ ರಸ್ತೆಯ ಗುಂಡಿಗಳನ್ನು ಮುಚ್ಚಲೂ ಸಹ ಲೋಕೋಪ ಯೋಗಿ ಇಲಾಖೆಯಲ್ಲಿ ಹಣವಿಲ್ಲವೇ? ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಈ ಬಗ್ಗೆ ಶಾಸಕರು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಎರಪಾರೆ ಗ್ರಾಮದ ಬಳಿಯ ಮುಖ್ಯರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲೂ ಕಷ್ಟಕರವಾಗಿದೆ.
ವಾಹನಗಳು ಗುಂಡಿ ತಪ್ಪಿಸುವ ಭರದಲ್ಲಿ ಅವಘಡಕ್ಕೆ ಈಡಾಗುತ್ತಿವೆ. ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಗೆ ಶಾಸಕರು ಚುರುಕು ಮುಟ್ಟಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.