ನಾಪೋಕ್ಲು, ಆ. ೪: ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅಸ್ಸಾಮಿ ಕಾರ್ಮಿಕರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಸಾರ್ವಜನಿಕರು ಮತ್ತು ಹಿಂದೂ ಪರ ಸಂಘÀಟನೆಗಳು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಾರುಗುಂದ ಗ್ರಾಮದಲ್ಲಿ ನಡೆದಿದೆ.

ಕಾರುಗುಂದ ಗ್ರಾಮದ ಬೊಳ್ದಂಡ ಉದಯ ಎಂಬವರ ತೋಟದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಮುಜಾಫರ್ ಹಕ್ (೩೭)

(ಮೊದಲ ಪುಟದಿಂದ) ಮತ್ತು ಸೂಫಿಕ್ (೨೬) ಸಾರ್ವಜನಿಕರ ಕೈಗೆ ಗೋಮಾಂಸ ಸಹಿತ ಸಿಕ್ಕಿ, ಇದೀಗ ಪೊಲೀಸರ ಅತಿಥಿಯಾಗಿರುವವರು.

ತೋಟ ಮಾಲೀಕ ಉದಯ ಅವರು ಮಡಿಕೇರಿಯಲ್ಲಿ ವಾಸವಿದ್ದು, ಅಲ್ಲಿಂದಲೇ ತೋಟಕ್ಕೆ ಬಂದು ಅಗತ್ಯ ಕೆಲಸ ಕಾರ್ಯಗಳನ್ನು ಕಾರ್ಮಿಕರಿಂದ ಮಾಡಿಸಿಕೊಂಡು ತೆರಳುವುದು ವಾಡಿಕೆ. ಇದನ್ನೇ ಬಳಸಿಕೊಂಡ ಇವರ ಲೈನ್ ಮನೆಯಲ್ಲಿದ್ದ ಮುಜಾಫರ್ ಮತ್ತು ಸೂಫಿಕ್, ಉದಯ ತೋಟಕ್ಕೆÀ ಬಾರದಿರುವ ಸಂದರ್ಭ ಸಾಧಿಸಿ, ತೋಟದ ಒಂದು ಭಾಗದಲ್ಲಿ ಗೋಮಾಂಸ ಮಾರಾಟಕ್ಕೆ ಸಿದ್ಧಪಡಿಸಿ, ಅದು ಇತರರ ಗಮನಕ್ಕೆ ಬಾರದಂತೆ ವಾಸವಾಗಿದ್ದ ಲೈನ್ ಮನೆಯಲ್ಲಿ ಸೂಟ್‌ಕೇಸ್‌ಗಳಲ್ಲಿ ತುಂಬಿ ಸಾಗಾಟಕ್ಕೆ ಯತ್ನಿಸುತ್ತಿದ್ದರು.

ಈ ಬಗ್ಗೆ ಸುಳಿವರಿತ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘÀಟನೆಗಳ ಕೆಲವರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರು ಕಾರ್ಮಿಕರನ್ನು ಹಿಡಿದು ನಾಪೋಕ್ಲು ಪೊಲೀಸರ ವಶಕ್ಕೆ ನೀಡಿದ್ದಾರೆ.

ನಾಪೋಕ್ಲು ಠಾಣಾಧಿಕಾರಿ ಸದಾಶಿವ ಅವರು ಸಿಬ್ಬಂದಿಗಳಾದ ಗಣೇಶ್ ಎಸ್.ಕೆ., ರವಿಕುಮಾರ್, ಹರ್ಷ ಎ.ಎನ್., ಪಂಚಲಿAಗಪ್ಪÀ, ಚಾಲಕ ಬಾಲಕೃಷ್ಣ ಅವರೊಂದಿಗೆ ಸ್ಥಳಕ್ಕೆ ಬಂದು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಗೋಮಾಂಸ ಸಿದ್ಧಪಡಿಸಿದ ಸ್ಥಳದಲ್ಲಿ ಅದರ ಚರ್ಮ, ತಲೆಯ ಭಾಗಗಳು ದೊರೆತಿದೆ.

ಬೆಟ್ಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಸದಸ್ಯ ಮುತ್ತಪ್ಪ ಮೊದಲಾದವರಿದ್ದರು.