ವೀರಾಜಪೇಟೆ, ಆ. ೨: ಹೋಂಸ್ಟೇ ಒಂದರಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿ ಸೇರಿದಂತೆ ಹೋಂಸ್ಟೇ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ-ಅಮ್ಮತ್ತಿ-ಒಂಟಿಅAಗಡಿ ನಿವಾಸಿ ಚಂದ್ರ ಎಂಬವರಿಗೆ ಸೇರಿದ ಕೂರ್ಗ್ ವಿಂಟೇಜ್ ವುಡ್ಸ್ ಹೋಂಸ್ಟೇಯಲ್ಲಿ ಸುಮಾರು ೬ ರಿಂದ ೭ ಮಂದಿ ವ್ಯಕ್ತಿಗಳು ಹಣ ಪಣಕ್ಕಿಟ್ಟು ಜೂಜಿನಲ್ಲಿ ತೊಡಗಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಅಮ್ಮತ್ತಿ ಉಪ ಠಾಣಾ ಎ.ಎಸ್.ಐ. ಕೆ.ಕೆ. ಧನಪತಿ ಮತ್ತು ಸಿಬ್ಬಂದಿ ಹೋಂಸ್ಟೇ ಮೇಲೆ ಧಾಳಿ ನಡೆಸಿದರು. ದಾಳಿ ವೇಳೆಯಲ್ಲಿ ಏಳು ಮಂದಿ ವ್ಯಕ್ತಿಗಳು ಅಕ್ರಮ ಜೂಜಿನಲ್ಲಿ ತೊಡಗಿದ್ದರು ಇವರ ಬಳಿಯಿಂದ ನಗದು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಹೋಂ ಸ್ಟೇ ಮಾಲೀಕ ಸೇರಿದಂತೆ ಏಳು ಮಂದಿಯ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.