ಗೋಣಿಕೊಪ್ಪ ವರದಿ, ಆ. ೩: ತಿತಿಮತಿ ಗ್ರಾಮದ ನಾಯಿಮನೆ ಹಾಡಿ ನಿವಾಸಿ ಈರಪ್ಪ ಅವರ ಪತ್ನಿ ಜ್ಯೋತಿ (೩೦) ತಾ. ೨ ರಿಂದ ನಾಪತ್ತೆಯಾಗಿದ್ದಾರೆ. ಸುಮಾರು ೫ ಅಡಿ ಎತ್ತರವಿದ್ದು, ಕಪ್ಪು ಬಣ್ಣ ಹೊಂದಿದ್ದಾರೆ. ಯರವ, ಕನ್ನಡ, ಕೊಡವ ಭಾಷೆ ಮಾತನಾಡುತ್ತಾರೆ.
ಪಿರಿಯಾಪಟ್ಟಣ ಆಸ್ಪತ್ರೆಗೆ ತೆರಳಿದವರು ಹಿಂತಿರುಗಿಲ್ಲ ಎಂದು ಪತಿ ಈರಪ್ಪ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದವರು ೦೮೨೭೪ -೨೪೭೩೩೩ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.