(ಅಂಚೆಮನೆ ಸುಧಿ)
*ಸಿದ್ದಾಪುರ, ಆ.೩: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ಹಳೆಯ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ವಾಯುಪುತ್ರ ಭವನ ಎಂದು ನಾಮಕರಣ ಮಾಡಲಾಗಿದೆ. ಆದರೆ ಕಾಮಗಾರಿಯ ಹಂತದಲ್ಲೇ ಬೆಳೆಗಾರರೊಬ್ಬರು ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಕರಾರು ತೆಗೆದಿದ್ದಾರೆ.
೧೯೩೦ ರಲ್ಲಿ ಈರಳೆವಳಮುಡಿ ಗ್ರಾಮದಲ್ಲಿ ಆರಂಭಗೊAಡ ದವಸ ಭಂಡಾರ ಕ್ರಮೇಣ ೧೯೭೩ ರಲ್ಲಿ ಕೃಷಿ ಪತ್ತಿನ ಸಹಕಾರದೊಂದಿಗೆ ವಿಲೀನವಾಯಿತು. ಇದೀಗ ಕಟ್ಟಡ ಶಿಥಿಲಗೊಂಡಿರುವುದರಿAದ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮತ್ತು ಮೇಲ್ಚಾವಣಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕಟ್ಟಡದಲ್ಲಿ ಅತಿಥಿಗೃಹದ ವ್ಯವಸ್ಥೆ ಮಾಡಲಾಗಿದ್ದು, ವಾಯುಪುತ್ರ ಭವನ ಎಂದು ಹೆಸರಿಡಲಾಗಿದೆ. ಇದಕ್ಕೆ ಪೂರಕವಾಗಿ ಕಟ್ಟಡದಲ್ಲಿ ಪಂಚಮುಖದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಆದರೆ ಭವನದ ಕಾಮಗಾರಿ ಅಂತಿಮ ಹಂತದಲ್ಲಿರುವಾಗಲೇ ಸ್ಥಳೀಯ ಬೆಳೆಗಾರರೊಬ್ಬರು ಈ ಕಟ್ಟಡ ಅರಣ್ಯ ಇಲಾಖೆಯ ಜಾಗದಲ್ಲಿದೆ ಎಂದು ತಕರಾರು ತೆಗೆದು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಳೆದ ಅನೇಕ ವರ್ಷಗಳಿಂದ ಸಹಕಾರ ಸಂಘದ ಕಟ್ಟಡ ಇದೇ ಪ್ರದೇಶದಲ್ಲಿದ್ದು, ಅರಣ್ಯ ಇಲಾಖೆಯ ಜಾಗ ಅತಿಕ್ರಮಣಗೊಂಡಿರುವ ಬಗ್ಗೆ ಕುರುಹುಗಳಿಲ್ಲ. ಇಲ್ಲಿ ಉತ್ತಮ ರೀತಿಯ ಒಂದು ಭವನ ನಿರ್ಮಾಣಗೊಳ್ಳುತ್ತಿದ್ದು, ಜನರಿಗೆ ಉಪಕಾರವಾಗಲಿದೆ ಎಂದು ಮರಳಿದ್ದಾರೆ.
ಈ ಬೆಳವಣಿಗೆಯಿಂದ ಬೇಸರಗೊಂಡಿರುವ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ವಾಯುಪುತ್ರ ಭವನಕ್ಕಾಗಿ ಸ್ಥಳೀಯ ಗ್ರಾಮಸ್ಥರಿಂದ ಸಹಿ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತ್ತಿದ್ದು, ಭವನದ ಪರ ಹಲವರು ನಿಂತಿದ್ದಾರೆ. ಸಹಿ ಸಂಗ್ರಹದ ಬಗ್ಗೆ ಕಟ್ಟಡದ ಬಳಿ ಬ್ಯಾನರ್ ಅಳವಡಿಸಲಾಗಿದೆ. ಈ ನಡುವೆ ಸಂಬAಧಿಸಿದ ಬೆಳೆಗಾರ ಮತ್ತೆ ಜಾಗದ ತಕರಾರು ತೆಗೆದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ನಿರ್ಧಾರ
ಈರಳೆವಳಮುಡಿಯಲ್ಲಿರುವ ಸುಮಾರು ೧೭ ಸೆಂಟ್ ಜಾಗ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ್ದಾಗಿದ್ದು, ಈ ಜಾಗದಲ್ಲಿ ವಾಯುಪುತ್ರ ಭವನದ ಯೋಜನೆ ಸಾಕಾರಗೊಳ್ಳುತ್ತಿದೆ. ಜಾಗಕ್ಕೆ ಸಂಬAಧಿಸಿದ ದಾಖಲೆಯನ್ನು ಪಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ದಾಖಲೆ ಸಂಗ್ರಹಿಸುವ ಬಗ್ಗೆ ಆ.೨೯ ರಂದು ನಡೆಯುವ ಸಂಘದ ಮಹಾಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಣಿ ಉತ್ತಪ್ಪ ತಿಳಿಸಿದ್ದಾರೆ.
ಮುಂದಿನ ವರ್ಷ ಜನವರಿಯಲ್ಲಿ ಸಂಕ್ರಾAತಿ ಹಬ್ಬದಂದು ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಚೆಟ್ಟಳ್ಳಿ ಸಹಕಾರ ಸಂಘದ ಕಟ್ಟಡದಲ್ಲಿ ನರೇಂದ್ರಮೋದಿ ಭವನ ನಿರ್ಮಾಣ, ಕಾವೇರಿ, ಪಶುಪತಿ, ಪುಣ್ಯಕೋಟಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಮೂಲಕ ಗಮನ ಸೆಳೆದಿದ್ದ ಮಣಿ ಉತ್ತಪ್ಪ, ಇದೀಗ ವಾಯುಪುತ್ರ ಭವನವನ್ನು ಜನರಿಗೆ ಅರ್ಪಿಸುವ ಉತ್ಸಾಹದಲ್ಲಿದ್ದಾರೆ.