ಕುಶಾಲನಗರ, ಆ. ೨: ವಾಸ್ತವ ವರದಿ ಪ್ರಕಟಿಸುವ ಮೂಲಕ ಪತ್ರಕರ್ತರು ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕೆಂದು ಮಡಿಕೇರಿಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಕುಶಾಲನಗರದಲ್ಲಿ ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘ ಮತ್ತು ಕುಶಾಲನಗರ ಪ್ರೆಸ್‌ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಪತ್ರಿಕಾರಂಗದ ಪ್ರಮುಖ ಜವಾಬ್ದಾರಿಯಾಗಿದೆ ಎಂದ ಅವರು, ಸಮಾಜದ ಆಗು-ಹೋಗುಗಳನ್ನು ಜನರಿಗೆ ಎತ್ತಿ ತೋರಿಸುವ ಕೆಲಸ ನಿರಂತರ ಸಾಗಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡ ಜಮೀರ್ ಅಹಮ್ಮದ್ ಪತ್ರಿಕೆಗಳು ಜನರಿಗೆ ನಿರಂತರವಾಗಿ ಮಾಹಿತಿ ಗಳನ್ನು ತಲುಪಿಸುವ ಕೆಲಸ ಮಾಡು ತ್ತಿದ್ದು, ವಸ್ತುನಿಷ್ಟ ವರದಿ ಮೂಲಕ ಜನರ ಭಾವನೆಗಳಿಗೆ ಧ್ವನಿಯಾಗ ಬೇಕೆಂದರು. ಕಾಂಗ್ರೆಸ್ ಮುಖಂಡ ಮಂಥರ್‌ಗೌಡ ಮಾತನಾಡಿ, ಸಕಾರಾತ್ಮಕ ವಿಷಯಗಳಿಗೆ ಮಾಧ್ಯಮಗಳು ಆದ್ಯತೆ ನೀಡಬೇಕು. ಪತ್ರಿಕಾರಂಗದ ಅರಿವಿಲ್ಲದವರು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವುದು ಕಳವಳಕಾರಿ ವಿಷಯ ಎಂದರು. ಈ ಸಂದರ್ಭ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಪ್ರೆಸ್‌ಕ್ಲಬ್ ಟ್ರಸ್ಟ್ನ ಅಧ್ಯಕ್ಷ ರವಿಕೋಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ವ ಸಂಪಾದಕರ ಸಂಘದ ಅಧ್ಯಕ್ಷ ಟಿ. ಮುನಿರಾಜು, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ತಾಲೂಕು ತಹಶೀಲ್ದಾರ್ ಪ್ರಕಾಶ್, ಮುಳ್ಳುಸೋಗೆ ಗ್ರಾ.ಪಂ. ಅಧ್ಯಕ್ಷ ಚೆಲುವರಾಜ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ, ಎನ್. ಮೋಹನ್ ಕುಮಾರ್, ಪಲ್ಲವಿ ಇದ್ದರು.