ವೀರಾಜಪೇಟೆ, ಆ. ೨: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಗೋಣಿಕೊಪ್ಪ ವರ್ತುಲದ ಸಂಯುಕ್ತ ಸಹಯೋಗದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ ಎಂಬಲ್ಲಿನ ನಿರ್ಗತಿಕ ವಿಧವೆಯೊಬ್ಬರಿಗೆ ನಿರ್ಮಿಸಿ ನೀಡಲಾದ ಮನೆಯ ಹಸ್ತಾಂತರ ಕಾರ್ಯ ನಡೆಯಿತು.
ಜಮಾಅತೆ ಇಸ್ಲಾಮೀ ಹಿಂದ್ ಕರಾವಳಿ ವಲಯ ಸಂಚಾಲಕ ಯು. ಅಬ್ದುಸ್ಸಲಾಮ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಕೆ. ಆಶಾ ಉಪಾಧ್ಯಕ್ಷೆ ವಿಜಯ, ಸದಸ್ಯರುಗಳಾದ ಅಫ್ರೋಝ್, ಚಂದ್ರಶೇಖರ್, ಶ್ಯಾಮಲಾ, ತಿತಿಮತಿ ಮಸೀದಿ ಅಧ್ಯಕ್ಷರಾದ ಮೊಯ್ದೀನ್, ಮರಪಾಲ ಜಮಾಅತ್ ಅಧ್ಯಕ್ಷ ಉಸ್ಮಾನ್, ಧಾರ್ಮಿಕ ಗುರುಗಳಾದ ಖಮರುದ್ದೀನ್ ಅಹ್ಸÀನಿ, ಉದ್ಯಮಿ ಕೆ. ಅಹಮದ್, ಜಮಾಅತೆ ಇಸ್ಲಾಮೀ ಜಿಲ್ಲಾ ಅಧ್ಯಕ್ಷರಾದ ಪಿ.ಕೆ. ಅಬ್ದುಲ್ ರೆಹೆಮಾನ್ ಇದ್ದರು. ಸಜೀದ್ ಅಝ್ಹರಿ ಖಿರಾಅತ್ ನಡೆಸಿದರು. ಪಿ.ಎಂ. ಮುಹಮ್ಮದ್ ಮಮ್ಮು ಸ್ವಾಗತಿಸಿದರು. ಎ.ಪಿ.ತನ್ವೀರ್ ವಂದಿಸಿದರು.