ವಾಷಿಂಗ್ಟನ್, ಆ. ೨: ಅಮೇರಿಕಾ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಲ್ಲಿ ಡ್ರೋನ್ ಮೂಲಕ ವಾಯುಧಾಳಿ ಕಾರ್ಯಾಚರಣೆ ನಡೆಸಿ, ಅಲ್ಖೆöÊದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿಯನ್ನು (ಂಟ-ಕಿಚಿeಜಚಿ ಅhieಜಿ ಂಥಿmಚಿಟಿ ಚಿಟ-Zಚಿತಿಚಿhiಡಿi) ಹತ್ಯೆ ಮಾಡಿವೆ.

ವಿಶ್ವದ ‘ಮೋಸ್ಟ್ ವಾಂಟೆಡ್’ ಉಗ್ರ ಎಂದೇ ಕರೆಯಲ್ಪಡುವ ಜವಾಹಿರಿ ಹತ್ಯೆಯ ಸುದ್ದಿಯನ್ನು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಖಚಿತಪಡಿಸಿದ್ದು, ‘ನಾವು ನಮ್ಮ ಜನತೆಗೆ ನ್ಯಾಯ ಒದಗಿಸಿದ್ದೇವೆ. ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಅಡಗಿ ಕುಳಿತಿದ್ದರೂ ಅಂತಹವರನ್ನು ಹುಡುಕಿ ಅಮೇರಿಕಾ ಕೊಲ್ಲುತ್ತದೆ’ ಎಂದು ಹೇಳಿದ್ದಾರೆ.

೯/೧೧ ಧಾಳಿಯ ‘ಮಾಸ್ಟರ್ ಮೈಂಡ್’

೯/೧೧ ಎಂದೇ ಕರೆಯುವ ಸೆಪ್ಟೆಂಬರ್ ೧೧, ೨೦೦೧ರಲ್ಲಿ ಅಮೇರಿಕಾದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರರ ಧಾಳಿಯ ಮಾಸ್ಟರ್ ಮೈಂಡ್ ಈತನೇ ಎಂದು ಹೇಳಲಾಗಿತ್ತು.

ಈ ಧಾಳಿಯಲ್ಲಿ ಮೂರು ಸಾವಿರ ಜನ ಮೃತರಾಗಿದ್ದರು. ಹತ್ತಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜವಾಹಿರಿ, ಕೀನ್ಯಾ, ತಾಂಜೇನಿಯಾದ ಅಮೇರಿಕಾ ರಾಯಭಾರ ಕಚೇರಿಗಳ ಮೇಲೆಯೂ ಧಾಳಿ ಸಂಘಟಿಸಿದ್ದ. ಜವಾಹಿರಿ ಹತ್ಯೆಗೆ ಕಳೆದ ೬ ತಿಂಗಳುಗಳಿAದ ಅಮೇರಿಕಾ ಗೌಪ್ಯವಾಗಿ ಯೋಜನೆ ರೂಪಿಸಿತ್ತು. ಜವಾಹಿರಿಗೆ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಕ್ಕಾನಿ ಕಾಬೂಲಿನಲ್ಲಿ ಆಶ್ರಯ ನೀಡಿದ್ದ. ಹಲವು ಮೂಲಗಳಿಂದ ಮಾಹಿತಿ ಕಲೆಹಾಕಿದ್ದ ಅಮೇರಿಕಾ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿ, ಅಲ್ ಜವಾಹಿರಿಯನ್ನು ಹತ್ಯೆ ಮಾಡಿದೆ.

ಅಲ್ಖೆöÊದಾ ನಾಯಕನಾಗಿದ್ದ ಒಸಾಮಾ ಬಿನ್ ಲಾಡೆನ್ ಅನ್ನು ಅಮೇರಿಕಾ ಭದ್ರತಾ ಪಡೆಗಳು ಪಾಕಿಸ್ತಾನದಲ್ಲಿ ೨೦೧೧ರಲ್ಲಿ ಹತ್ಯೆ ಮಾಡಿದ ಬಳಿಕ ಜವಾಹಿರಿ ಉಗ್ರಗಾಮಿ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ. ಆತನ ಸುಳಿವು ನೀಡಿದವರಿಗೆ ೨.೫ ಕೋಟಿ ಡಾಲರ್ ಬಹುಮಾನವನ್ನು ಅಮೇರಿಕಾ ಘೋಷಿಸಿತ್ತು. ಅಫ್ಘಾನಿಸ್ತಾನವನ್ನು ಸುದೀರ್ಘ ೨೦ ವರ್ಷ ತನ್ನ ಅಧೀನದಲ್ಲಿ ಇರಿಸಿಕೊಂಡಿದ್ದ ಅಮೇರಿಕಾ ಆಗಸ್ಟ್ ೩೧, ೨೦೨೧ ರಂದು ಅಲ್ಲಿಂದ ಹೊರ ನಡೆದಿತ್ತು. ನಂತರದ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಬೇಹುಗಾರಿಕೆ ಚಟುವಟಿಕೆ ನಡೆಸುತ್ತಿತ್ತಾದರೂ ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಫ್ಘಾನಿಸ್ತಾನದಿಂದ ಸೇನೆಯ ಹಿಂತೆಗೆತದ ಬಳಿಕ ಅಮೇರಿಕಾ ನಡೆಸಿರುವ ಮೊದಲ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈಜಿಫ್ಟ್ ಮೂಲದ ಜವಾಹಿರಿ ಈಜಿಫ್ಟ್ ರಾಜಧಾನಿ ಕೈರೊದಲ್ಲಿಯೇ ಬಾಲ್ಯ ಕಳೆದಿದ್ದ.

ವೃತ್ತಿಯಲ್ಲಿ ಶಸ್ತçಚಿಕಿತ್ಸಕನಾಗಿದ್ದ ಅವನು, ನಂತರದ ದಿನಗಳಲ್ಲಿ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡ. ೯/೧೧ ಧಾಳಿಯ ನಂತರ ಈತ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಆಗಾಗ ವೀಡಿಯೋ ಸಂದೇಶಗಳನ್ನು ಹರಿಬಿಡುತ್ತಿದ್ದ.

ಸೆಪ್ಟೆಂಬರ್ ೧೧ರ ಅಮೇರಿಕಾದ ಮೇಲೆಯೆ ಧಾಳಿಯ ನಂತರ ೨೦೦೧ರ ಕೊನೆಯಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಅಮೇರಿಕಾ ಪಡೆಗಳು ಕಿತ್ತೆಸೆದಾಗ ಬಿನ್ ಲಾಡೆನ್ ಮತ್ತು ಜವಾಹಿರಿ ಇಬ್ಬರೂ ತಪ್ಪಿಸಿಕೊಂಡಿದ್ದರು. ೨೦೧೧ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೇರಿಕಾ ಧಾಳಿ ನಡೆಸಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದ ನಂತರ ಅಯ್ಮನ್ ಅಲ್-ಜವಾಹಿರಿಯನ್ನು ಅಲ್-ಖೈದಾದ ಎರಡನೇ ‘ಜನರಲ್ ಎಮಿರ್’ ಎಂದು ಘೋಷಿಸಲಾಯಿತು.

ಬ್ಯುಸಿನೆಸ್ ಮತ್ತು ಎಕನಾಮಿಕ್ಸ್ ಅಡ್ಮಿನಿಸ್ಟೆçÃಷನ್ ಅಧ್ಯಯನ ಮಾಡಿದ ಅಲ್ ಜವಾಹಿರಿ ಸಿವಿಲ್ ಇಂಜಿನಿಯರಿAಗ್‌ನಲ್ಲಿ ಪದವಿಯನ್ನು ಸಹ ಪಡೆದಿದ್ದು, ೭೧ ವರ್ಷ ವಯಸ್ಸಿನ ಜವಾಹಿರಿ ಮೂರು ವರ್ಷಗಳ ಕಾಲ ಈಜಿಪ್ಟ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ.

ಅಲ್- ಜವಾಹಿರಿ ೩೦ ವರ್ಷ ವಯಸ್ಸಿನ ಯುವಕನಾಗಿದ್ದಾಗ, ಅನ್ವರ್ ಸಾದತ್ ಅವರ ಹತ್ಯೆಗಾಗಿ ೧೯೮೧ರ ಅಕ್ಟೋಬರ್‌ನಲ್ಲಿ ಬಂಧಿಸಲ್ಪಟ್ಟ. ೧೯೭೦ ರಲ್ಲಿಯೇ ಈಜಿಪ್ಟಿನ ಇಸ್ಲಾಮಿಕ್ ಜಿಹಾದ್ (ಇIಎ) ಸ್ಥಾಪಿಸಿದ್ದ. ಇದು ಈಜಿಫ್ಟ್ನಲ್ಲಿ ಇಸ್ಲಾಂ ಆಡಳಿತವನ್ನು ಹೇರಲು ಹೋರಾಡುತಿತ್ತು. ನಂತರ ಇದನ್ನು ಅಲ್-ಖೈದಾದೊಂದಿಗೆ ವಿಲೀನಗೊಳಿಸಿದ್ದಲ್ಲದೆ ಬಿನ್ ಲಾಡೆನ್‌ನ ಪ್ರಮುಖ ಸಹಾಯಕನಾಗಿ ಅಮೇರಿಕಾದ ವಿರುದ್ಧದ ಹಲವಾರು ಧಾಳಿಗಳಲ್ಲಿ ನೇರವಾಗಿ ಪಾಲ್ಗೊಂಡಿದ್ದ.

ಕೈರೋದಲ್ಲಿ ಮದುವೆ

೧೯೭೮ ರಲ್ಲಿ ಕೈರೋದಲ್ಲಿ ನಡೆದ ಅಲ್ ಜವಾಹಿರಿಯ ವಿವಾಹ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೈರೋ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತçದ ವಿದ್ಯಾರ್ಥಿನಿಯಾಗಿದ್ದ ಅಜಾ ನೊವಾರಿ ಎಂಬಾಕೆಯನ್ನು ವಿವಾಹವಾಗಿದ್ದ. ಆಗ ಈಜಿಫ್ಟ್ ಉದಾರವಾದಿ ದೇಶವಾಗಿತ್ತು. ಆದರೆ ಅಲ್ ಜವಾಹಿರಿಯ ಮದುವೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಛಾಯಾಗ್ರಾಹಕರು ಮತ್ತು ಸಂಗೀತಗಾರರಿಗೆ ವಿವಾಹ ಸಮಾರಂಭದಲ್ಲಿ ಪ್ರವೇಶವಿರಲಿಲ್ಲ. ನಗು ಮತ್ತು ಹಾಸ್ಯವನ್ನು ಸಹ ನಿಷೇಧಿಸಲಾಗಿತ್ತು.

೭೧ ವರ್ಷದ ಅಲ್- ಜವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್‌ನ ವೈಯಕ್ತಿಕ ವೈದ್ಯರಾಗಿ (ಸರ್ಜನ್) ಕೆಲಸ ಮಾಡಿದ್ದ. ಒಸಾಮಾ ಬಿನ್ ಲಾಡೆನ್ ಅನ್ನು ಕೊಂದ ೧೧ ವರ್ಷಗಳ ನಂತರ ಈಗ ಜವಾಹಿರಿ ಹತ್ಯೆಯಾಗಿದೆ. ಅಮೇರಿಕಾದ ಅಧಿಕಾರಿಗಳ ಪ್ರಕಾರ, ಜವಾಹಿರಿ ಕಾಬೂಲ್‌ನ ಸುರಕ್ಷಿತ ಗೃಹದಲ್ಲಿ ಆಶ್ರಯ ಪಡೆದಿದ್ದ. ಜುಲೈ ೩೦ ರಂದು ರಾತ್ರಿ ೯.೪೮ಕ್ಕೆ ನಡೆದ ಡ್ರೋನ್ ಧಾಳಿಯಲ್ಲಿ ಆತನನ್ನು ಕೊಲ್ಲಲಾಗಿದೆ.

ಹಿಜಾಬ್ ವಿಷಯದಲ್ಲಿ ಭಾರತಕ್ಕೂ ಬೆದರಿಕೆ

ಕಳೆದ ಫೆಬ್ರವರಿಯಲ್ಲಿ ಮಂಡ್ಯದಲ್ಲಿ ಹಿಜಾಬ್ ನಿಷೇಧ ಹೋರಾಟದ ಸಂದರ್ಭದಲ್ಲಿ ಧಾರ್ಮಿಕ ಘೋಷಣೆ ಕೂಗಿದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರಶಂಸಿಸಿ ವೀಡಿಯೋ ಹರಿಬಿಟ್ಟಿದ್ದ ಆಲ್ ಜವಾಹಿರಿ ಆಕೆಯನ್ನು ಸಹೋದರಿ ಎಂದು ಸಂಬೋಧಿಸಿ ಆಕೆಯನ್ನು ಹೊಗಳುವ ಕಿರು ಕವಿತೆಯನ್ನೂ ರಚಿಸಿದ್ದ. ವೀಡಿಯೋದಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ಧಾಳಿ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದ.

-ಇಂದ್ರೇಶ್ ಕೋವರ್‌ಕೊಲ್ಲಿ