ಮಡಿಕೇರಿ, ಕಣಿವೆ, ಆ. ೨ : ಪ್ರತೀ ವರ್ಷದ ಶ್ರಾವಣ ಮಾಸದಲ್ಲಿ ಮೊದಲು ಬರುವ ಹಿಂದೂಗಳ ಪವಿತ್ರ ಹಬ್ಬವಾದ ನಾಗರಪಂಚಮಿಯನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮಹಿಳೆಯರು ಮುಂಜಾನೆ ಬೇಗೆದ್ದು ಮನೆ ಮುಂದೆ ರಂಗೋಲಿ ಇಟ್ಟು ಸ್ವಚ್ಛಗೊಳಿಸಿ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ತೆರಳಿ ಕಲ್ಲಿನ ನಾಗರ ಮೂರ್ತಿಗಳನ್ನು ಪೂಜಿಸಿ ಹಾಲೆರೆದರು. ಕೆಲವು ಮಹಿಳೆಯರು ಅಲ್ಲಲ್ಲಿ ಕಂಡು ಬಂದ ಹುತ್ತಗಳನ್ನು ಪೂಜಿಸಿ ಹಾಲೆರೆದರು.
ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಭಕ್ತ ಮಹಿಳೆಯರು ಕಲ್ಲಿನ ನಾಗರ ಮೂರ್ತಿಗಳಿಗೆ ಹಾಲೆರೆದು ಪುನೀತರಾದರು. ದೇವಾಲಯದ ಅರ್ಚಕ ಕೃಷ್ಣಮೂರ್ತಿ ಭಟ್ ದೇಗುಲದ ಒಳಗೆ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ವಿಶೇಷ ವಾಗಿ ಪೂಜಿಸಿದರು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ಸ್ಥಾಪಿಸಿದ ಶ್ರೀ ನಾಗದೇವರ ಮೂರ್ತಿಗಳಿಗೆ ನಾಗರ ಪಂಚಮಿ ಅಂಗವಾಗಿ ವಿಶೇಷಪೂಜೆ ನಡೆಸಲಾಯಿತು.
ಪೂಜಾ ಕಾರ್ಯವನ್ನು ಕುಶಾಲನಗದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕ ಸೋಮಶೇಖರ್ ಭಟ್ ಮತ್ತು ತಂಡ ನೆರವೇರಿಸಿತು. ಪೂಜೆಯಲ್ಲಿ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ವೀರಾಜಪೇಟೆ: ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ನಾಗ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಇಲ್ಲಿನ ಶ್ರೀ ನಾಗ ದೇವರ ಗುಡಿಯಲ್ಲಿ ದೇವರಿಗೆ ಸೀಯಾಳ, ಹಾಲು ಹಾಗೂ ಪಂಚಾಮೃತ ಅಭಿಷೇಕ ಸೇವೆಗಳು ಜರುಗಿದವು. ದೇವಸ್ಥಾನದ ಅರ್ಚಕರಾದ ವಿಶ್ವನಾಥಭಟ್ಟ ಮಹಾ ನಾಗ ತಂಬಿಲವನ್ನು ಮಾಡಿ ಮಹಾ ಮಂಗಳಾರತಿಯನ್ನು ನಡೆಸಿದರು. ಭಕ್ತರಿಗೆ ತೀರ್ಥ ಪ್ರಸಾದವನ್ನು ವಿತರಿಸಿದರು. ಹಬ್ಬದ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಆಶೀರ್ವಾದ ಪಡೆದರು.
* ವೀರಾಜಪೇಟೆ: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಪಾಲೆಟ್ ಮಕ್ಕಿಯಲ್ಲಿರುವ ನಾಗ ದೇವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಅರ್ಚಕರಾದ ಬಿ. ಎಸ್. ವೇಣುಗೋಪಾಲ್ ರವರು ನಾಗ ದೇವರಿಗೆ ಹಾಲಿನ ಅಭಿಷೇಕವನ್ನು ಮಾಡಿ ನಾಗ ತಂಬಿಲವನ್ನು ನೆರವೇರಿಸಿದರು. ನೈವೇದ್ಯವನ್ನು ಸಮರ್ಪಿಸಿದರು.
ಬಳಿಕ ಮಹಾ ಮಂಗಳಾರತಿಯು ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆಯು ಜರುಗಿತು. ಹೆಗ್ಗಳ ಹಾಗೂ ಬೇಟೋಳಿ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಪೊನ್ನಂಪೇಟೆ: ಗೋಣಿಕೊಪ್ಪಲು ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿAದಲೇ ನೂರಾರು ಭಕ್ತಾಧಿಗಳು ನಾಗ ದೇವರಿಗೆ ಪೂಜೆ ಸಲ್ಲಿಸಿ, ಹರಕೆ ಅರ್ಪಿಸಿದರು.
ನಾಗಮೂರ್ತಿಗೆ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ಪೂಜೆಗಳನ್ನು ಸಲ್ಲಿಸಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿವತಿಯಿAದ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ನಡೆಯಿತು.
ಈ ಸಂದರ್ಭ ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಉಪಾಧ್ಯಕ್ಷ ಕುಪ್ಪಿರ ಸನ್ನಿ ಸೋಮಯ್ಯ, ಖಜಾಂಚಿ ಜಪ್ಪೆಕೋಡಿ ಉತ್ತಪ್ಪ, ಕಾರ್ಯದರ್ಶಿ ಪೊನ್ನಿಮಾಡ ಬೋಜಪ್ಪ, ಸಹ ಕಾರ್ಯದರ್ಶಿ ಕುಲ್ಲಚಂಡ ಪ್ರಮೋದ್ ಗಣಪತಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.ಕೂಡಿಗೆ: ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ನಾಗರ ಪಂಚಮಿ ಆಚರಣೆಯು ವಿಶೇಷ ಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪಂಚಮಿ ಅಂಗವಾಗಿ ಬೆಳಗ್ಗೆನಿಂದಲೇ ವಿಶೇಷ ಪೂಜೆ, ಹೋಮ ಹವನ ಸುಬ್ರಹ್ಮಣ್ಯ ಸ್ವಾಮಿಗೆ ಹಾಲಾಭಿಷೇಕ , ಪಂಚಾಮೃತ ಅಭಿಷೇಕ ಗಣಪತಿ ಪೂಜೆ ಸರ್ಪಶಾಂತಿ ಹೋಮ, ಪೂರ್ಣಾಹುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು ಪೂಜಾ ಕೈಂಕರ್ಯಗಳನ್ನು ಅರ್ಚಕ ನವೀನ ಸೇರಿದಂತೆ, ಬೆಂಗಳೂರಿನ ಅನಂತ ಭಟ್ಟರ ತಂಡ ನೆರವೇರಿಸಿತು. ದೇವಾಲಯದಲ್ಲಿ ವಿವಿಧ ಹೂ ಮತ್ತು ತಳಿರು ತೋರಣಗಳಿಂದ ಸಿಂಗಾರಕೊAಡಿತ್ತು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು ಕೂಡ್ಲೂರು ಹಾರಂಗಿ, ಮುಳ್ಳುಸೋಗೆ ಗ್ರಾಮಗಳ ನೂರಾರು ಭಕ್ತರು ಆಗಮಿಸಿದರು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿರುವ ದೇವಾಲಯ ಮತ್ತು ನಾಗ ಬನಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಳಿಗ್ಗೆ ೯ ಗಂಟೆಗೆ ಪೂಜೆ ಆರಂಭವಾಗಿ ನಾಗದೇವರಿಗೆ ಹಾಲಭಿಷೇಕ, ಎಳನೀರು ಅಭಿಷೇಕ, ಅರಿಶಿಣ ಅಭಿಷೇಕವನ್ನು ವಿಶೇಷವಾಗಿ ಮಾಡಲಾಯಿತು.
ನಂತರ ಪುಷ್ಪಾಲಂಕಾರದೊAದಿಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಕ್ಷೇತದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವಿನೋದ್, ಕಾರ್ಯದರ್ಶಿ ದಿನೇಶ್ ಮತ್ತು ಪದಾಧಿಕಾರಿಗಳು ಇದ್ದರು.
ನವನಾಗ ಸನ್ನಿಧಿಯಲ್ಲಿ: ಸಮೀಪದ ಸಿದ್ಧಲಿಂಗಪುರದ ಅರಿಶಿಣಗುಪ್ಪೆಯ ಶ್ರೀಮಂಜುನಾಥಸ್ವಾಮಿ ಮತ್ತು ನವನಾಗನಾಥ ದೇವಾಲಯದಲ್ಲಿ ನಾಗರಪಂಚಮಿಯನ್ನು ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಆಚರಿಸಲಾಯಿತು.
ಕ್ಷೇತ್ರದ ಗುರುಗಳಾದ ರಾಜೇಶ್ನಾಥ್ಜಿ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ಜರುಗಿತು. ಬೆಳಿಗ್ಗೆ ಮಂಜುನಾಥ ದೇವಾಲಯದಲ್ಲಿ ಗಣಪತಿಹೋಮದೊಂದಿಗೆ ಪೂಜೋತ್ಸವ ಆರಂಭವಾಗಿ ನಂತರ ಮಂಜುನಾಥ ದೇವರಿಗೆ ರುದ್ರಾಭಿಷೇಕ ಮತ್ತು ವಿವಿಧ ಅಭಿಷೇಕಗಳೊಂದಿಗೆ ಪೂಜೆ ನಡೆಯಿತು.
ಕ್ಷೇತ್ರದಲ್ಲಿರುವ ಶ್ರೀ ನಾಗದೇವರಿಗೆ ಹಾಲಭಿಷೇಕ, ಎಳನೀರು ಅಭಿಷೇಕ, ತಂಬಿಲ ಸೇವೆ, ನಾಗಬಿಂಬ ಪ್ರಾರ್ಥನೆ ಮತ್ತು ಸಮರ್ಪಣೆ ನಡೆಯಿತು. ವಿಶೇಷ ಪುಷ್ಪಾಲಂಕಾರದೊAದಿಗೆ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು. ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.