ಮಡಿಕೇರಿ, ಆ. ೨: ತಾ. ೧ ರಿಂದ ಅಬ್ಬಿಫಾಲ್ಸ್ನಲ್ಲಿ ಪ್ರವಾಸಿಗರಿಂದ ಪ್ರವೇಶ ಶುಲ್ಕ ಪಡೆಯಲು ಜಿಲ್ಲಾಧಿಕಾರಿಗಳೇ ಆದೇಶ ನೀಡಿದ್ದು, ಈ ಪ್ರದೇಶದ ಅಭಿವೃದ್ಧಿಗಾಗಿ ಪಂಚಾಯಿತಿ ವತಿಯಿಂದಲೇ ಹಣ ಸಂಗ್ರಹಾತಿ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಅಧ್ಯಕ್ಷ ಡೀನ್ ಬೋಪಣ್ಣ ಸ್ಪಷ್ಟನೆ ನೀಡಿದ್ದಾರೆ.
ಶುಲ್ಕ ವಸೂಲಾತಿಗೆ ಅವಕಾಶ ನೀಡುವಂತೆ ಪಂಚಾಯಿತಿ, ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜುಲೈ ೧೫ ರಂದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ತಾ. ೨೫ ರಂದು ಹಲವು ಷರತ್ತುಗಳನ್ನು ವಿಧಿಸಿ ಶುಲ್ಕ ವಸೂಲಾತಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದರು.
೨೦೨೨-೨೩ನೇ ಸಾಲಿನಲ್ಲಿ ಅರ್ಧ ಅವಧಿಯು ಮುಗಿದು ಹೋಗಿದ್ದು, ಮತ್ತು ಸರಕಾರಿ ಬಿಡ್ಡು ನಿಗದಿಗೆ ಪಂಚಾಯಿತಿಗೆ ಅಂದಾಜು ಲೆಕ್ಕ ಹಾಕಲು ಸಾಧ್ಯವಾಗದ ಕಾರಣ ೨೦೨೨-೨೩ನೇ ಸಾಲಿನಲ್ಲಿ ಪಂಚಾಯಿತಿಯಿAದಲೇ ಪ್ರವೇಶ ಶುಲ್ಕ ವಸೂಲಾತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ವಾಹನ ಪಾರ್ಕಿಂಗ್ ಶುಲ್ಕದ ಗುತ್ತಿಗೆದಾರರಿಂದ ಕಿರುಕುಳವಾಗಿದ್ದು, ಪಂಚಾಯಿತಿ ಉಲ್ಲಂಘನೆ ಮಾಡಿರುವುದರಿಂದ ಪ್ರವೇಶ ಶುಲ್ಕವನ್ನು ನೇರವಾಗಿ ಪಂಚಾಯಿತಿಯೇ ವಸೂಲಿ ಮಾಡುತ್ತಿದೆ ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ.