ಸಿದ್ದಾಪುರ, ಆ ೨: ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಹಾಗೂ ದಿನಬಳಕೆ ವಸ್ತುಗಳ ಮೇಲೆ ಜಿ.ಎಸ್.ಟಿ ಹಾಕಿರುವುದನ್ನು ಖಂಡಿಸಿ ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ಗ್ರಾ.ಪಂ ಸಮಿತಿಯ ವತಿಯಿಂದ ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಸಿಪಿಐ(ಎಂ) ಮುಖಂಡ ಪಿ.ಆರ್ ಭರತ್ ಮಾತನಾಡಿ ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆ ಏರಿಕೆಯನ್ನು ಮಾಡಿರುವುದನ್ನು ಖಂಡಿಸಿದರು. ದೈನಂದಿನ ವಸ್ತುಗಳ ಮೇಲೆ ಜಿ.ಎಸ್.ಟಿ ಹಾಕಿರುವುದನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಪದಾಧಿಕಾರಿಗಳಾದ ಟಿ.ಟಿ ಉದಯಕುಮಾರ್, ಜೋಸ್ ಮೋಣಪ್ಪ, ರವಿ, ಚಂದ್ರನ್, ಯೂಸೂಫ್, ರಾಜು, ಶಿವಪ್ಪನಾಯ್ಕ್ ಇನ್ನಿತರರು ಹಾಜರಿದ್ದರು.