ಇದು ಜಿಲ್ಲೆಯ ಗಡಿ, ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕಲ್ಲುಗುಂಡಿ ಗ್ರಾಮದ ವ್ಯಥೆಯ ಕತೆ.., ನಿನ್ನೆ ರಾತ್ರಿಯ ಮಳೆಗೆ ಸಂಪಾಜೆ ಭಾಗದ ಎರಡು ಮನೆಗಳು ಜಲಾವೃತವಾದರೆ, ಕಲ್ಲುಗುಂಡಿಯ ಇಪ್ಪತ್ತಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ದಾರಿಯುದ್ದಕ್ಕೂ ಇರುವ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಲ್ಲುಗುಂಡಿ ಮುಳುಗಡೆಯಾಗಿದೆ..!

ಮನೆಗಳಿಗೆ ನೀರು

ಕೊಡಗು ಜಿಲ್ಲೆಗೆ ಹೊಂದಿಕೊAಡAತೆ ಇರುವ ಗಡಿಭಾಗದ ಸಂಪಾಜೆಯಲ್ಲಿನ ರಸ್ತೆ ಬದಿ ಇರುವ ಶ್ರೀಧರ ಹಾಗೂ ಅಂಜನಾದೇವಿ ಎಂಬವರಿಗೆ ಸೇರಿದ ಮನೆಗೆ ನೀರು ನುಗ್ಗಿ ಒಳಗಿದ್ದ ಸಾಮಗ್ರಿಗಳೆಲ್ಲ ಮುಳುಗಡೆಯಾಗಿವೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರ ಮನೆಯೊಳಗಡೆ ಇದ್ದ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಸಾಮಗ್ರಿಗಳು ಕೊಚ್ಚಿಕೊಂಡು ಹೋಗಿವೆ. ಮನೆಯ ಹಿಂಭಾಗದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ. ನೀರಿನ ರಭಸ ಎಷ್ಟಿತ್ತೆಂದರೆ ಹಾಕಿದ್ದ ಬಾಗಿಲಿನ ಕಟ್ಟಳೆ ಕಿತ್ತುಬಂದಿದೆ.

ಪಕ್ಕದಲ್ಲೇ ಇರುವ ಗಣೇಶ್ ಅವರಿಗೆ ಸೇರಿದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಡೆ ಇದ್ದ ಬೆಲೆಬಾಳುವ (ಮೊದಲ ಪುಟದಿಂದ) ವಸ್ತುಗಳು ಸೇರಿದಂತೆ ಎಲ್ಲವೂ ನಾಶವಾಗಿದೆ. ಸನಿಹದಲ್ಲೇ ಇರುವ ವರ್ಕ್ಶಾಪ್‌ಗೂ ನೀರು ನುಗ್ಗಿ ನಿಲ್ಲಿಸಿದ್ದ ಬೈಕ್‌ಗಳು ತೇಲಿಹೋಗಿವೆ. ವಾಹನಗಳ ಬಿಡಿಭಾಗಗಳು ಕೊಚ್ಚಿಕೊಂಡು ಹೋಗಿವೆ.

ಕಲ್ಲುಗುಂಡಿ

ಕಲ್ಲುಗುAಡಿಯ ನಿವಾಸಿ ಅಬ್ಬಾಸ್ ಎಂಬವರ ಮನೆಗೆ ನೀರು ನುಗ್ಗಿ ಒಳಗಿದ್ದ ವಸ್ತುಗಳೆಲ್ಲವೂ ನೀರು ಪಾಲಾಗಿವೆ. ಮನೆಯಲ್ಲಿ ಅಬ್ಬಾಸ್ ಪತ್ನಿ, ಮಗು, ತಾಯಿ ಇದ್ದರು. ನೀರು ಬರುತ್ತಿರುವದನ್ನು ಅರಿತ ಸ್ಥಳೀಯರು ಇವರುಗಳನ್ನು ಪಕ್ಕದ ಮನೆಗೆ ಸ್ಥಳಾಂತರಿಸಿದ್ದಾರೆ. ಪ್ರಕಾಶ್, ಕರುಣಾಕರ ಸೇರಿದಂತೆ ಒಟ್ಟು ೨೦ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಅAಗಡಿಗಳು ನಾಶ

ಕಲ್ಲುಗುಂಡಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮಳಿಗೆಗಳಿವೆ. ಸನಿಹದಲ್ಲೇ ಪಯಸ್ವಿನಿ ಹರಿಯುತ್ತದೆ. ಆದರೆ, ಇದುವರೆಗೆ ಎಷ್ಟೇ ಮಳೆ ಬಂದರೂ ನದಿ ಉಕ್ಕಿ ಹರಿದಿರಲಿಲ್ಲ. ನಿನ್ನೆ ರಾತ್ರಿಯ ಒಂದೇ ಮಳೆಗೆ ನದಿ ಉಕ್ಕಿಹರಿದು ಅಂಗಡಿ ಮಳಿಗೆಗಳಿಗೆಲ್ಲ ನೀರು ನುಗ್ಗಿದೆ. ಹೊಟೇಲ್, ತರಕಾರಿ ಅಂಗಡಿ, ತೆಂಗಿನಕಾಯಿ, ಅಡಕೆ ಅಂಗಡಿ, ಸೆಲೂನ್, ಎಲೆಕ್ಟಿçಕ್, ಎಲೆಕ್ಟಾçನಿಕ್ ಅಂಗಡಿಗಳು, ವರ್ಕ್ಶಾಪ್, ಕೋಳಿಮಾಂಸ ಮಾರಾಟ ಮಳಿಗೆಗಳಿಗೂ ನೀರು ನುಗ್ಗಿ ಸಂಪೂರ್ಣ ನಾಶವಾಗಿವೆ. ಇಂದು ಬೆಳಿಗ್ಗೆಯಿಂದಲೇ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ವಾತಾವರಣ ಸಾವಿನ ಮನೆಯಂತೆ ಶೋಕದಲ್ಲಿ ಮುಳುಗಿತ್ತು..!

ಕೆಟ್ಟು ನಿಂತ ಬಸ್..!

ನಿನ್ನೆ ಮಧ್ಯರಾತ್ರಿ ಮಂಗಳೂರು ಕಡೆಗೆ ತೆರಳುತ್ತಿದ್ದ ರಾಜಹಂಸ ಬಸ್‌ಒಂದು ರಸ್ತೆ ಮಧ್ಯೆ ಕೆಟ್ಟು ನಿಂತಿದೆ. ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ನೀರು ತುಂಬಿಕೊAಡಿತ್ತು. ಹಾಗಾಗಿ ಬಸ್ ಅನ್ನು ಅಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಅತ್ತ ಕಡೆಯಿಂದ ಬಂದ ಬೇರೆ ಬಸ್‌ನಲ್ಲಿ ಕಳುಹಿಸಲಾಗಿದೆ. ಬಸ್‌ನ ಇಂಜಿನ್ ಒಳಗಡೆ ನೀರು ಸೇರಿಕೊಂಡ ಪರಿಣಾಮ ಬೆಳಿಗ್ಗೆ ಸ್ಟಾರ್ಟ್ ಆಗದೆ ಅಲ್ಲಿಯೇ ನಿಂತುಕೊAಡಿದೆ..!

ಕೊಚ್ಚಿಹೋದ ಕಾರುಗಳು..!

ನೀರಿನ ರಭಸಕ್ಕೆ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರುಗಳು ಕೂಡ ಕೊಚ್ಚಿಕೊಂಡು ಹೋಗಿವೆ. ಕಲ್ಲುಗುಂಡಿಯ ಮೌರಿಸ್ ಡಿಸೊಜಾ ಅವರ ಮನೆಯ ಅಂಗಳದಲ್ಲಿ ಎರಡು ಕಾರುಗಳನ್ನು ನಿಲ್ಲಿಸಲಾಗಿತ್ತು. ಮಳೆ ನೀರಿನ ರಭಸಕ್ಕೆ ಎರಡೂ ಕಾರುಗಳು ಕೊಚ್ಚಿಕೊಂಡು ಹೋಗಿ ೫೦ ಮೀಟರ್ ದೂರದಲ್ಲಿ ಮರಕ್ಕೆ ತಾಗಿ ನಿಂತಿವೆ..!

ಫ್ರಿಡ್ಜ್-ಸಿಲಿAಡರ್ ಹೋಯ್ತು..!

ಕಲ್ಲುಗುಂಡಿಯ ಹಮೀದ್ ಎಂಬವರು ಹೊಟೇಲ್ ನಡೆಸಿಕೊಂಡು ಅದರಿಂದಲೇ ಜೀವನ ಸಾಗಿಸುತ್ತಿದ್ದರು. ಮಳೆ ನೀರಿಗೆ ಅವರ ಹೊಟೇಲ್‌ನಲ್ಲಿದ್ದ ಫ್ರಿಡ್ಜ್, ಅನಿಲ ಸಿಲಿಂಡರ್, ಸ್ಟೌ, ಅಕ್ಕಿ, ದಿನಸಿ ಸಾಮಗ್ರಿಗಳು, ೨೫ ಕ್ರೇಟ್ ಮೊಟ್ಟೆ ಸೇರಿದಂತೆ ಎಲ್ಲವೂ ಕೊಚ್ಚಿಹೋಗಿವೆ. ರಾತ್ರಿ ಮುಚ್ಚಿದ್ದ ಶಟರ್ ಡೋರ್‌ಗೆ ಯಾವದೋ ವಸ್ತು ಬಡಿದು ಡೋರ್ ಮುರಿದು ಹೋಗಿದೆ.

ಯುವಕ ಸಂಘದ ಸಹಕಾರ

ಸಂಪಾಜೆ, ಕೊಯನಾಡು, ಕಲ್ಲುಗುಂಡಿ ವ್ಯಾಪ್ತಿಯಲ್ಲಿ ಅನಾಹುತ ಸಂಭವಿಸಿರುವ ಬಗ್ಗೆ ಮಾಹಿತಿ ದೊರೆತೊಡನೆ ಕಾರ್ಯಾಚರಣೆಗಿಳಿದ ಚೆಂಬು ಗ್ರಾಮದ ಶ್ರೀ ಭಗವಾನ್ ಯುವಕ ಸಂಘದ ಸದಸ್ಯರುಗಳು ಸ್ವಯಂಪ್ರೇರಿತರಾಗಿ ಶ್ರಮದಾನಕ್ಕಿಳಿದಿದ್ದಾರೆ. ಅಧಿಕಾರಿಗಳ ತಂಡ ಬರುವ ಮೊದಲೇ ತಂಡ ತಂಡವಾಗಿ ಮನೆಗಳನ್ನು ಸ್ವಚ್ಛ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಸಂಘದ ಗೌರವ ಅಧ್ಯಕ್ಷ ಅನಂತ್ ಊರುಬೈಲು, ಅಧ್ಯಕ್ಷ ಯತೀಶ್ ಹನಿಯಡ್ಕ ನೇತೃತ್ವದಲ್ಲಿ ಸುಮಾರು ೩೮ ಮಂದಿ ಸಂತ್ರಸ್ತರಿಗೆ ನೆರವಾದರು.

ಅಧಿಕಾರಿಗಳಿಗೆ ಕಾದರು..!

ನಿನ್ನೆ ನಡುರಾತ್ರಿ ನೀರು ನುಗ್ಗಿದ್ದರೂ ಇಂದು ಮಧ್ಯಾಹ್ನವಾದರೂ ಕಲ್ಲುಗುಂಡಿ, ಸಂಪಾಜೆ ಭಾಗಕ್ಕೆ ಜಿಲ್ಲಾಡಳಿತದ ಯಾವದೇ ಅಧಿಕಾರಿಗಳ ಆಗಮನವಾಗಲಿಲ್ಲ. ಸಂತ್ರಸ್ತರು ಅಲ್ಲಲ್ಲಿ ಗುಂಪುಗೂಡಿಕೊAಡು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಾಯುತ್ತಿದ್ದುದು ಕಂಡುಬAದಿತು. ಕೆಲವರು ಇನ್ನೆಷ್ಟು ಕಾಯುವದೆಂದು ಮಧ್ಯಾಹ್ನದ ಬಳಿಕ ತಾವೇ ಸ್ವಚ್ಛತಾ ಕಾರ್ಯಕ್ಕೆ ಇಳಿದರು.