ಗುಡ್ಡ ಕುಸಿದು ನಾಲ್ವರು ದುರ್ಮರಣ
ಭಟ್ಕಳ, ಆ. ೨: ಉತ್ತರ ಕನ್ನಡದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಮುಟ್ಟಳ್ಳಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು ಅವಶೇಷಗಳಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತದೇಹಗಳನ್ನು ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಅವಶೇಷಗಳ ಅಡಿ ಸಿಲುಕಿ ಮೃತಪಟ್ಟವರನ್ನು ಲಕ್ಷಿö್ಮÃ ನಾರಾಯಣ ನಾಯ್ಕ್, ಅನಂತ ನಾಯ್ಕ್, ಪ್ರವೀಣ ನಾಯ್ಕ್ ಹಾಗೂ ಲಕ್ಷಿö್ಮÃ ನಾಯ್ಕ್ ಎಂದು ಗುರುತಿಸಲಾಗಿದೆ. ಮನೆ ಮೇಲೆ ದಿಢೀರ್ ಗುಡ್ಡ ಕುಸಿದಿದ್ದರಿಂದ ಮನೆಯಲ್ಲಿದ್ದವರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಈ ಸುದ್ದಿ ತಿಳಿದ ಕೂಡಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಇನ್ನು ಸ್ಥಳೀಯರು ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಭಟ್ಕಳದಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಕಡೆ ನೀರು ತುಂಬಿ ಭಾರೀ ಅನಾಹುತ ಸಂಭವಿಸಿದೆ. ಶಿರಾಲಿ ಭಾಗದಲ್ಲಿ ಅನೇಕ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಫಾಜಿಲ್ ಹತ್ಯೆ ಪ್ರಕರಣ-ಆರು ಮಂದಿ ಬಂಧನ
ಮAಗಳೂರು, ಆ. ೨: ಮಂಗಳೂರು ಹೊರವಲಯ ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕಾಂತ್ ತಿಳಿಸಿದ್ದಾರೆ. ಬಂಧಿತರನ್ನು ಸುಹಾಸ್ ಶೆಟ್ಟಿ, ಮೋಹನ್, ಗಿರಿಧರ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ ಆದರೆ ಇದು ಪ್ರತೀಕಾರದ ಕೊಲೆ ಎಂದು ಸಾಕಷ್ಟು ಸುಳಿವುಗಳು ತಿಳಿಸುತ್ತವೆ ಎಂದಿದ್ದಾರೆ. ಜುಲೈ ೨೬ ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಸುಹಾಸ್, ಮೋಹನ್ ಮತ್ತು ಅಭಿಷೇಕ್ ಅವರು ಡ್ರ‍್ಯಾಗನ್ ಮತ್ತು ತಲ್ವಾರ್ ಬಳಸಿ ಫಾಜಿಲ್‌ನ್ನು ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಆರೋಪಿಗಳು ೬-೭ ಜನರನ್ನು ಗುರಿಯಾಗಿರಿಸಿಕೊಂಡಿದ್ದರು. ಕೊನೆಗೆ ಫಾಜಿಲ್‌ನನ್ನು ಹತ್ಯೆ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬ ಫಾಜಿಲ್‌ಗೆ ಪರಿಚಿತನಾಗಿದ್ದು, ಆತನ ಚಲನವಲನಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಆರೋಪಿಗಳು ಕಾರ್ಕಳ ಸಮೀಪದ ಇನ್ನಾ ಗ್ರಾಮದಲ್ಲಿ ಅಪರಾಧ ಕೃತ್ಯಕ್ಕೆ ಬಳಸಿದ್ದ ಕಾರನ್ನು ಬಿಟ್ಟು ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ತಲೆಮರೆಸಿಕೊಂಡಿದ್ದರು.
ಪ್ರವೀಣ್ ಹತ್ಯೆ ಪ್ರಕರಣ-ಇಬ್ಬರು ಶಂಕಿತರ ಬಂಧನ
ಮAಗಳೂರು, ಆ. ೨: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬAಧಿಸಿದAತೆ ಮತ್ತಿಬ್ಬರು ಶಂಕಿತ ಹಂತಕರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬೆಳ್ಳಾರೆ ಸಮೀಪದ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ (೩೨) ಹ್ಯಾರಿಸ್ (೪೨) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು. ಇಬ್ಬರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ೧೯೬೭ರ ಯುಎ(ಪಿ) ಕಾಯ್ದೆಯ ಸೆಕ್ಷನ್ ೧೬, ೧೮ ಮತ್ತು ಐಪಿಸಿ ಸೆಕ್ಷನ್ ೩೦೨ ಮತ್ತು ೧೨೦ ಬಿ ಆರ್/ ಡಬ್ಲ್ಯೂ ೩೪ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಎಂಬುವರನ್ನು ಜುಲೈ ೨೮ ರಂದು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದ ನಂತರ ವಿಚಾರಣೆ ಮುಂದುವರೆಸಿದಾಗ ಸಿಕ್ಕ ಮತ್ತಷ್ಟು ಸಾಕ್ಷಿ ಆಧಾರಗಳೊಂದಿಗೆ ಸದ್ದಾಂ ಮತ್ತು ಹ್ಯಾರಿಸ್ ಅವರನ್ನು ಬಂಧಿಸಲಾಗಿದೆ.
ಹೆಲಿಕಾಪ್ಟರ್ ಪತನ - ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಸೇರಿ ಐವರ ಸಾವು
ಇಸ್ಲಾಮಾಬಾದ್, ಆ. ೨: ಬಲೂಚಿಸ್ತಾನದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಹಾಗೂ ಐವರು ಹಿರಿಯ ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಸೇನೆ ಮಂಗಳವಾರ ತಿಳಿಸಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡುತ್ತಿದ್ದ ೧೨ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸರ್ಫಾಜ್ ಆಲಿ ಸೇರಿದಂತೆ ಐವರಿದ್ದ ಹೆಲಿಪಾಕ್ಟರ್ ದುರಾದೃಷ್ಟವಶಾತ್ ಲಾಸ್ ಬೆಲಾದಲ್ಲಿ ಅಪಘಾತಕ್ಕೀಡಾಗಿದೆ. ಎಲ್ಲ ಆರು ಅಧಿಕಾರಿಗಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸಶಸ್ತç ಪಡೆ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿದ್ದಾರೆ. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ಪತನವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜ್ವಾ ತಿಳಿಸಿದ್ದು, ಶರೀಫ್ ಘಟನೆ ಕುರಿತು ದು:ಖ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಮಾನಕ್ಕೆ ಸಿಡಿಲು ಬಡಿತ
ಬೆಂಗಳೂರು, ಆ. ೨: ಬೆಂಗಳೂರಿನಿAದ ಹೈದರಾಬಾದ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ಇಂಡಿಯಾ ವಿಮಾನಕ್ಕೆ ಸಿಡಿಲು ಬಡಿದಿದೆ. ಇದರಿಂದ ವಿಮಾನ ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದರೆ ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ೯೧ ಪ್ರಮಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಯಾನದ ಏರ್‌ಬಸ್ ಎ೩೨೦ ಬೆಳಿಗ್ಗೆ ೭.೩೯ರ ಸುಮಾರಿಗೆ ಟೆಕ್‌ಆಫ್ ಆಗಿತ್ತು. ಆದರೆ ಆಗಸದ ಮಧ್ಯೆ ವಿಮಾನಕ್ಕೆ ಸಿಡಿಲು ಬಡಿದಿದೆ. ಸಿಡಿಲು ಬಡಿತ ಅಪರೂಪವಾಗಿದ್ದರೂ ಸಂಭವಿಸುತ್ತವೆ. ಆದರೆ ಸಿಡಿಲು ಬಡಿತದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆತ
ಕೋಲ್ಕತ್ತಾ, ಆ. ೨: ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಂದು ಕೊಲ್ಕತ್ತ ಬಳಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ. ಸಚಿವರ ಮೇಲೆ ಯಾಕೆ ಚಪ್ಪಲಿ ಎಸೆದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳಿಗೆ ಉತ್ತರಿಸಿದ ಮಹಿಳೆ ನಿಮಗೆ ಗೊತ್ತಿಲ್ಲವೇ?, ಅವನು ಎಷ್ಟೋ ಬಡವರ ಹಣವನ್ನು ಲಪಟಾಯಿಸಿದ್ದಾನೆ, ಫ್ಲಾಟ್‌ಗಳನ್ನು ಖರೀದಿಸಿದ್ದಾನೆ ಮತ್ತು ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ, ಅವನನ್ನು ಎಸಿ ಕಾರಿನಲ್ಲಿ ಸಾಗಿಸಲಾಗುತ್ತಿದೆ. ಅವನ ತಲೆಗೆ ಚಪ್ಪಲಿ ಬಡಿದರೆ ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಹೇಳಿದರು. ಎಷ್ಟೋ ಜನರಿಗೆ ತಟ್ಟೆಯಲ್ಲಿ ಊಟವಿಲ್ಲ. ಇವರು ಕೆಲಸ ಕೊಡಿಸುವ ಭರವಸೆ ನೀಡಿ ಹಣ ತೆಗೆದುಕೊಂಡರು. ನಂತರ ಎಂಜಾಯ್ ಮಾಡಿ ಫ್ಲಾಟ್‌ಗಳನ್ನು ಖರೀದಿಸಿದರು. ಇದು ನನ್ನ ಕೋಪ ಮಾತ್ರವಲ್ಲ, ಪಶ್ಚಿಮ ಬಂಗಾಳದ ಲಕ್ಷ ಲಕ್ಷ ಜನರ ಕೋಪ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯಾದ್ಯಂತ ಮಳೆರಾಯನ ಅಬ್ಬರ
ಬೆಂಗಳೂರು, ಆ. ೨: ಕಳೆದ ಕೆಲ ದಿನಗಳಿಂದ ಕೊಂಚ ತಗ್ಗಿದ್ದ ಮಳೆರಾಯನ ಆರ್ಭಟ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮತ್ತೆ ಶುರುವಾಗಿದೆ. ಕಳೆದೆರಡು ದಿನಗಳಿಂದ ಮತ್ತೆ ಸಾಕಷ್ಟು ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಇಂದಿನಿAದ ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆಯ ಅಬ್ಬರ ಕೊಂಚ ಏರಿಕೆಯಾಗಲಿದ್ದು, ಸಂಜೆಯ ಹೊತ್ತಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಅಬ್ಬರ ಶುರುವಾಗುತ್ತಿದೆ. ಗುಡುಗು ಸಹಿತ ಮಳೆಯಿಂದ ರಾಜಧಾನಿಯಲ್ಲಿ ಮರಗಳು, ರೆಂಬೆ ಕೊಂಬೆಗಳು ಧರೆಗೆ ಉರುಳುತ್ತಿವೆ. ಧಾರವಾಡ, ಗದಗ, ಬಳ್ಳಾರಿ, ಮಂಡ್ಯ, ರಾಮನಗರ, ಯಾದಗಿರಿಗಳಲ್ಲಿ ಇಂದಿನಿAದ ತಾ. ೪ ರವೆರೆಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ತಾ. ೪ ರಂದು ಯೆಲ್ಲೋ ಅಲರ್ಟ್ನ್ನು ರಾಜ್ಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ.