ಗೋಣಿಕೊಪ್ಪಲು, ಆ. ೨: ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಗೋಣಿ ಕೊಪ್ಪಲುವಿನ ಗ್ರಾಮ ಪಂಚಾಯಿತಿ ಸದಸ್ಯ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಹಕೀಮ್ ನೇಮಕಗೊಳಿಸಿ ಕರ್ನಾಟಕ ಸರಕಾರ ಆದೇಶಿಸಿದೆ. ಗೋಣಿಕೊಪ್ಪ ನಗರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ, ತಾಲೂಕು ಅಧ್ಯಕ್ಷನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಇವರು ಕೆಲಸ ಮಾಡಿದ್ದಾರೆ.
ಉಳಿದಂತೆ ಮಂಡಳಿಯ ಉಪಾಧ್ಯಕ್ಷರುಳಾಗಿ ಮಹಮ್ಮದ್ ನಾಸೀರ್, ಎಂ.ಜಿ. ಜಾಹಿರ್, ಫಯಾಸ್ ಅಹಮ್ಮದ್, ಅಬ್ದುಲ್ ಲತೀಫ್, ಮೊಯ್ದು, ಯೂಸೂಫ್, ಮೌಸೀದ್ ಡಿ.ಎಂ. ಹಾಗೂ ಮೌಲನ ಶಾಫಿಸಾದಿ, ನಿರ್ದೇಶಕರಾಗಿ ವಕೀಲ ಕುಂಞಅಬ್ದುಲ್ಲ, ಸಿ.ಎಂ. ಆಸೀಫ್, ಮಹಮ್ಮದ್ ಶಾಫಿ ಎಂ.ಎಸ್, ಪಿ.ಎಂ. ಶಾಜಿ, ಸಿ.ಎಸ್. ಅಬ್ದುಲ್ ಅಸೀಸ್, ಮೊಯ್ದು ಕುಂಞÂ, ಅಂ.ಬಿ. ಅಬ್ದುಲ್ ಹಮೀದ್, ಕೆ.ಎಸ್. ಅಶ್ರಫ್, ಇಬ್ರಾಹಿಂಸೀದಿ, ಆಲೀರ ಎ. ಅಬ್ದುಲ್ಲ, ಯು. ಇಮ್ರಾನ್, ಹಾಗೂ ಪಿ.ಎಂ. ಹಂಸ ಆಯ್ಕೆಯಾಗಿದ್ದಾರೆ.