ಕೂಡಿಗೆ, ಆ. ೧: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹಾರಂಗಿಯಿAದ ಕಣಿವೆವರೆಗಿನ ಮುಖ್ಯ ನಾಲೆ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಎಡದಂಡೆಯ ಮುಖ್ಯ ನಾಲೆಯ ದುರಸ್ತಿ ಕಾರ್ಯಕ್ಕೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಡ್ರೋನ್ ಕ್ಯಾಮರಾ ದ ಮೂಲಕ ಹಾರಂಗಿ ೧ ರಿಂದ ೧೮ ನೇ ತೂಬುರವರೆಗೆ ಸರ್ವೆ ಕಾರ್ಯ ನಡೆಯುತ್ತಿದೆ.
ಹಾರಂಗಿ ಅಚ್ಚುಕಟ್ಟು ಉಪವಿಭಾಗ ಹುಲಗುಂದ ವ್ಯಾಪ್ತಿಯಲ್ಲಿ ಬರುವ ಹಾರಂಗಿಯ ೧ರಿಂದ ೧೮ನೇ ತೂಬಿನವರೆಗೆ ವಿತರಣೆ ನಾಲೆಗಳಲ್ಲಿ ೧೫ ಕಿಲೋ ಮೀಟರ್ ಹಾರಂಗಿ ನಾಲೆಯು ಸಂಪೂರ್ಣವಾಗಿ ಹದ್ದಗೆಟ್ಟಿರುವುದರಿಂದ ನಾಲೆ ದುರಸ್ತಿಗೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿ ದುರಸ್ತಿಗೆ ಒತ್ತಾಯ ಮಾಡಿದರು. ಅದರನ್ವಯ ಶಾಸಕರು ರಾಜ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಿಗೆ ಪತ್ರ ವ್ಯವಹಾರ ನಡೆಸಿ, ಸಚಿನ ಗೋವಿಂದ ಕಾರಜೋಳ ಅವರು ಶಾಸಕ ಪತ್ರಕ್ಕೆ ತಕ್ಷಣವೇ ಸ್ಪಂದಿಸಿ ಕಾವೇರಿ ನೀರಾವರಿ ನಿಗಮದ ಮೂಲಕ ದುರಸ್ತಿ ಕಾರ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.
ಸಚಿವರ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಈಗಾಗಲೇ ಹಾರಂಗಿಯಿAದ ೧ರಿಂದ ೧೮ ನೇ ತೂಬನವರೆಗೆ ಮುಖ್ಯ ನಾಲೆ ಎರಡು ಕಡೆಗಳ ನಾಲೆಯ ಲೈನಿಂಗ್ ದುರಸ್ತಿ ನಡೆಸುವ ಬಗ್ಗೆ ಡ್ರೋನ್ ಕ್ಯಾಮರಾ ಮೂಲಕ ಸಮಗ್ರವಾದ ಚಿತ್ರಣ ಮತ್ತು ನಾಲೆ ವ್ಯಾಪ್ತಿಯ ಎರಡೂ ಕಡೆಗಳಿಗೆ ಸೇರಿದ ಜಾಗದ ಒತ್ತುವರಿ ಮಾಹಿತಿಗಳ ಸಂಗ್ರಹದಲ್ಲಿ ಒತ್ತಾಯ ಮಾಡಿದರು. ಅದರನ್ವಯ ಶಾಸಕರು ರಾಜ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಿಗೆ ಪತ್ರ ವ್ಯವಹಾರ ನಡೆಸಿ, ಸಚಿನ ಗೋವಿಂದ ಕಾರಜೋಳ ಅವರು ಶಾಸಕ ಪತ್ರಕ್ಕೆ ತಕ್ಷಣವೇ ಸ್ಪಂದಿಸಿ ಕಾವೇರಿ ನೀರಾವರಿ ನಿಗಮದ ಮೂಲಕ ದುರಸ್ತಿ ಕಾರ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.
ಸಚಿವರ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಈಗಾಗಲೇ ಹಾರಂಗಿಯಿAದ ೧ರಿಂದ ೧೮ ನೇ ತೂಬನವರೆಗೆ ಮುಖ್ಯ ನಾಲೆ ಎರಡು ಕಡೆಗಳ ನಾಲೆಯ ಲೈನಿಂಗ್ ದುರಸ್ತಿ ನಡೆಸುವ ಬಗ್ಗೆ ಡ್ರೋನ್ ಕ್ಯಾಮರಾ ಮೂಲಕ ಸಮಗ್ರವಾದ ಚಿತ್ರಣ ಮತ್ತು ನಾಲೆ ವ್ಯಾಪ್ತಿಯ ಎರಡೂ ಕಡೆಗಳಿಗೆ ಸೇರಿದ ಜಾಗದ ಒತ್ತುವರಿ ಮಾಹಿತಿಗಳ ಸಂಗ್ರಹದಲ್ಲಿ ಬೇಕಾಗುವ ಇಲಾಖೆಯ ನಿಯಮನುಸಾರವಾಗಿ ಅನುದಾನ ಬಿಡುಗಡೆಗೊಳುವ ಹಿನ್ನೆಲೆಯಲ್ಲಿ ಕಾಮಗಾರಿಯ ಕ್ರಿಯಾ ಯೋಜನೆ ಮತ್ತು ಟೆಂಡರ್ ಪ್ರಕ್ರಿಯೆ ನಡೆಸಲು ಎಲ್ಲಾ ಸಿದ್ದತೆಗಳು ನಿಗಮದ ವತಿಯಿಂದ ನಡೆಯುತ್ತಿವೆ. ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಟೆಂಡರ್ ಪ್ರಕ್ರಿಯೆ ನಡೆದು ನಂತರ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತವೆ.
-ಕೆ.ಕೆ. ನಾಗರಾಜಶೆಟ್ಟಿ