ಸುಂಟಿಕೊಪ್ಪ, ಆ. ೧: ಪ್ರವೀಣ್ ನೆಟ್ಟಾರು ಹತ್ಯೆಯ ಜಾಲವನ್ನು ಬಯಲಿಗೆಳೆಯಬೇಕೆಂದು ಪುತ್ತೂರು ಬಿಲ್ಲವ ಸಮಾಜದ ಖಜಾಂಜಿ ಮಹೇಶ್ ಸಾಲಿಯಾನ್ ಆಗ್ರಹಿಸಿದರು.

ಭಾನುವಾರ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಹೋಬಳಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ಹತ್ಯೆಯ ಖಂಡನೆ ಮತ್ತು ಸೂಕ್ತ ಪರಿಹಾರಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ತಮಗೆ ವಹಿಸಿದ ಜವಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ ನಿಷ್ಠೆಯಿಂದ ಮಾಡುತ್ತಿದ್ದ ಪ್ರವೀಣ್ ಅವರನ್ನು ಕಳೆದುಕೊಂಡು ಬಿಲ್ಲವ ಸಮಾಜ ಅನಾಥವಾಗಿದೆ ಎಂದು ವಿಷಾದಿಸಿದರು. ಪ್ರವೀಣ್ ನೆಟ್ಟಾರು ಅವರ ಕೊಲೆ ನಮ್ಮ ಸಮುದಾಯದಲ್ಲಿ ಕೊನೆಂiÀi ಕೊಲೆ ಪ್ರಕರಣವಾಗಲಿ ಎಂದು ಹೇಳಿದರಲ್ಲದೆ ಪ್ರವೀಣ್ ಅವರ ಕುಟುಂಬಕ್ಕೆ ರೂ ೧ ಕೋಟಿ ಪರಿಹಾರ ಮತ್ತು ಪ್ರವೀಣ್ ಪತ್ನಿಗೆ ಸೂಕ್ತ ಸರಕಾರಿ ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.

ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್ ಅವರು ಮಾತನಾಡಿ ಪ್ರವೀಣ್ ನೆಟ್ಟಾರು ಹತ್ಯೆ ನಮ್ಮ ಮನೆಯ ಮಗನ ಹತ್ಯೆಯಾದಂತೆ ಎಂದು ವಿಷಾದಿಸಿದರು.

ಕನ್ನಡ ವೃತ್ತದಲ್ಲಿ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸಮಾಜದ ಮತ್ತು ದೇಯಿಬೈದೇದಿ ಸಂಘದ ಸದಸ್ಯರು ಮಾನವ ಸರಪಳಿ ರಚಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಲ್ಲವ ಸಮಾಜದ ಪ್ರಮುಖರಾದ ದಿನೇಶ್ ಸತ್ಯ ಕರ್ಕೇರ ಮತ್ತಿತರರು ಘೋಷಣೆಗಳನ್ನು ಕೂಗಿ ಸರಕಾರ, ಜನಪ್ರತಿನಿಧಿಗಳು, ಸಚಿವರು, ಪಕ್ಷದ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಇದೇ ಸಂದರ್ಭದಲ್ಲಿ ದಿವಂಗತ ಪ್ರವೀಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸರ್ಮಪಿಸಲಾಯಿತು.

ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಸುಂಟಿಕೊಪ್ಪ ಆರಕ್ಷಕ ಉಪನಿರೀಕ್ಷಕರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಕಾರ್ಯದರ್ಶಿ ವೆಂಕಪ್ಪ ಹಾಗೂ ದೇಯಿಬೈದೇದಿ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಕಾರ್ಯದರ್ಶಿ ಮಹಿಮಾ ಸತ್ಯ, ಬಿಲ್ಲವ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪ್ರೀತಮ್, ಕಾರ್ಯದರ್ಶಿ ಯಕ್ಷಿತ್, ಸೋಮವಾರಪೇಟೆ ಬಿಲ್ಲವ ಸಂಘದ ರಮೇಶ್ ಕರಾವಳಿ, ಪ್ರಶಾಂತ್, ಹರೀಶ್ ಕೊಟ್ಯಾನ್, ಇಂದಿರಾ ಮೊಣ್ಣಪ್ಪ, ಇಂದಿರಾ ರಮೇಶ್, ಕುಶಾಲನಗರ ಬಿಲ್ಲವ ಸಮಾಜದ ಮಂಜು, ಸುಂಟಿಕೊಪ್ಪ ಬಿಲ್ಲವ ಸಂಘದ ಡಾ. ಯಶೋಧರ ಪೂಜಾರಿ, ಬಿ.ಕೆ. ಮೋಹನ್, ನಾಗೇಶ್, ಪೂಜಾರಿ, ಬಾಬು ಪೂಜಾರಿ, ಬಿ.ಎಸ್. ರಮೇಶ್ ಪೂಜಾರಿ, ದೇವಪ್ಪ, ದಿನೇಶ್ ತೊಂಡೂರು, ಪದ್ಮನಾಭ ಸೇರಿದಂತೆ ನೂರಾರು ಪದಾಧಿಕಾರಿಗಳು ಹಾಜರಿದ್ದರು.