ಮಡಿಕೇರಿ, ಆ. ೧: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಾಜಿ ಕೇಂದ್ರ ಸಚಿವ ಸುಬ್ರಮಣ್ಯ ಸ್ವಾಮಿ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಲಾಯಿತು. ಕೊಡವ ಜನಾಂಗ ಕಳೆದ ೩೨ ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಾ ಬರುತ್ತಿರುವ ಸುಬ್ರಮಣ್ಯ ಸ್ವಾಮಿ ಅವರೊಂದಿಗೆ ಕೊಡವ ಜನಾಂಗದ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭ ಸಂಘಟನೆಯ ವಾರ್ಷಿಕ ‘ಕೊಡವ ನ್ಯಾಷನಲ್ ಡೇ’ ಆಚರಣೆಗೆ ಆಗಮಿಸುವಂತೆ ಸ್ವಾಮಿ ಅವರನ್ನು ಆಹ್ವಾನಿಸಲಾಯಿತು. ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ, ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪುಲ್ಲೇರ ಸ್ವಾತಿ ಕಾಳಪ್ಪ, ಅರೆಯಡ ಗಿರೀಶ್, ಚಂಬAಡ ಜನತ್, ಅಪ್ಪಾರಂಡ ಪೂವಣ್ಣ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ ಅವರು ಹಾಜರಿದ್ದರು.