ಮಡಿಕೇರಿ, ಆ. ೧: ಬೆಂಗಳೂರಿನ ಆ್ಯಂಟೋನಿ ಕ್ಲಾ Êಟ್ ಶಾಲೆಯಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಸಮೀಪದ ಕೈಕೇರಿಯ ಕಾಲ್ಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಓಪನ್ ಸೈಟ್ ರಿಫಿಲ್ ವಿಭಾಗದಲ್ಲಿ ಅಂಚಲ್ ಗಂಗ, ಅಯಿರ ಬೋಪಣ್ಣ, ಕ್ರಷ್ ಗಣಪತಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿ.ಎನ್. ದೇವಯ್ಯ, ವಿಹಾ ಪೊನ್ನಮ್ಮ, ಅಕ್ಷಯ ಪ್ರಸಾದ್, ಆದ್ಯ ಚೋಂದಮ್ಮ ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.

ಪೀಪ್ ಸೈಟ್ ರಿಫಿಲ್ ವಿಭಾಗದಲ್ಲಿ ನೀಶ್ಮ ನೀಲಮ್ಮ ಕಂಚು, ಎಸ್. ಅಭಿಷೇಕ್ ಹಾಗೂ ವಿದ್ಯಾ ಅರುಣ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

೧೭ರ ವಯೋಮಾನದ ಪೀಪ್‌ಸೈಟ್ ಬಾಲಕಿಯರ ವಿಭಾಗದಲ್ಲಿ ನಿಷ್ಮಾ ನೀಲಮ್ಮ, ಮುತ್ತಮ್ಮ ಪಿ.ಪಿ., ನೇಹಾ ಪ್ರಶಾಂತ್ ವಿಜೇತರಾಗಿದ್ದಾರೆ.