ಕರಿಕೆ,ಆ: ೧. ಜಿಲ್ಲೆಯ ಅಂತರಾಜ್ಯ ಸಂಪರ್ಕ ರಸ್ತೆಯಲ್ಲಿ ಒಂದಾದ ಭಾಗಮಂಡಲ- ಕರಿಕೆ ಪಾಣತ್ತೂರು ಅಂತರ್ ರಾಜ್ಯ ಹೆದ್ದಾರಿಯಲ್ಲಿನ ಬಾಚಿಮಲೆ ಬಳಿ ರಸ್ತೆಗೆ ಗುಡ್ಡ ಜಾರಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಭಾಗಮಂಡಲದಿAದ ಹದಿನೈದು ಕಿ.ಮಿ.ದೂರದ ಬಾಚಿಮಲೆ ಎಂಬಲ್ಲಿ ಹದಿನೈದಕ್ಕೂ ಅಧಿಕ ಕಡೆಯಲ್ಲಿ

ದೊಡ್ಡ ಪ್ರಮಾಣದ ಬರೆಕುಸಿದ ಪರಿಣಾಮ ಮಣ್ಣು , ಬಂಡೆಕಲ್ಲು ಹಾಗೂ ದೊಡ್ಡ ಮರಗಳು ಉರುಳಿ ಬಿದ್ದ ಪರಿಣಾಮ ಕಳೆದ ತಡರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

(ಮೊದಲ ಪುಟದಿಂದ) ಭಾನುವಾರ ಸಂಜೆ ಸುರಿದ ಧಾರಾಕಾರ ಗಾಳಿ ಮಳೆಯಿಂದಾಗಿ ಈ ಘಟನೆ ನಡೆದಿರುವ ಸಾದ್ಯತೆ ಇದ್ದು ಕಳೆದ ಹದಿನೈದು ವರ್ಷಗಳ ಹಿಂದೆ ಇದೇ ರೀತಿ ಗುಡ್ಡ ಕುಸಿದು ಹಲವಾರು ದಿನಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಬೆಳಿಗ್ಗೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಮಾಡಲು ಶ್ರಮಿಸಿದ್ದು ಲೋಕೋಪಯೋಗಿ ಇಲಾಖೆ ವತಿಯಿಂದ ಎರಡು ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ಹಾಗೂ ಕಲ್ಲು ಮರಗಳನ್ನು ತೆರವುಗೊಳಿಸಿ ಸಂಜೆ ವೇಳೆಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಖಾಸಗಿ ಬಸ್, ಸರಕಾರಿ ಬಸ್ ಸೇರಿದಂತೆ ಐವತ್ತಕ್ಕೂ ಅಧಿಕ ವಾಹನಗಳು ಸ್ಥಳದಲ್ಲಿ ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿತ್ತು.

-ಸುಧೀರ್ ಹೊದ್ದೆಟ್ಟಿ