ಗೋಣಿಕೊಪ್ಪ ವರದಿ, ಜು. ೩೧: ಮಾನವನ ಬದುಕಿನಲ್ಲಿ ಹುಲಿ ಸಂರಕ್ಷಣೆ ಕೂಡ ಒಂದು ಭಾಗವಾಗಿದೆ ಎಂದು ವನ್ಯಜೀವಿ ಪ್ರೇಮಿ ಕುಂಞAಗಡ ಬೋಸ್ ಮಾದಪ್ಪ ಹೇಳಿದರು.

ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಲದಲ್ಲಿ ಆಯೋಜಿಸಿದ್ದ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಹುಲಿ ಸಂರಕ್ಷಣೆ ಬಗ್ಗೆ ಸಾಕ್ಷö್ಯಚಿತ್ರ ಪ್ರದರ್ಶಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ, ರೋರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಶ್ರೇಯಸ್, ಕಾರ್ಯದರ್ಶಿ ಸ್ಪೂರ್ತಿ, ಪ್ರಮುಖ ಕೇಶವಮೂರ್ತಿ ಇದ್ದರು.