ಮಡಿಕೇರಿ, ಜು. ೩೧: ಕೊಡಗು ವೃತ್ತದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆಗಳು ಸಾವನ್ನಪ್ಪುತ್ತಿರುವ ಪ್ರಕರಣದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ (ಸೆಸ್ಕ್) ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿದ್ಯುತ್ ಮಾರ್ಗಗಳ ಸ್ಥಿತಿ-ಗತಿಯ ಬಗ್ಗೆ ಜಂಟಿ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಈ ವಿಚಾರಕ್ಕೆ ಸಂಬAಧಿಸಿದAತೆ ಸೆಸ್ಕ್ನ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ನಡೆಸಲಾಗಿದ್ದು, ಈ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದಿನಿAದಲೂ ವಿದ್ಯುತ್ ಸ್ಪರ್ಶದಿಂದ ಕಾಡಾನೆಗಳು ಸಾವಿಗೀಡಾಗಿದ್ದು, ಇತ್ತೀಚೆಗಷ್ಟೆ ನೆಲ್ಲಿಹುದಿಕೇರಿಯಲ್ಲಿ ಎರಡು ಆನೆ ಹಾಗೂ ಕುಟ್ಟ ವ್ಯಾಪ್ತಿಯಲ್ಲಿ ಒಂದು ಆನೆ ಸಾವಿಗೀಡಾಗಿದೆ. ಕಾಡಾನೆಗಳು ಮಾತ್ರವಲ್ಲದೆ ಮನುಷ್ಯರು ಕೆಲಸ-ಕಾರ್ಯಗಳ ಸಂದರ್ಭ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವ ಹಲವಷ್ಟು ದುರಂತಗಳು ಜಿಲ್ಲೆಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಈ ಎರಡು ಇಲಾಖೆಗಳ ಜಂಟಿ ಸಭೆಯನ್ನು ಆಯೋಜಿಸಲಾಗಿತ್ತು.

ಎರಡು ಇಲಾಖೆಯ ಅಧಿಕಾರಿಗಳು ಪ್ರಚಲಿತ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಚರ್ಚೆಯ ಬಳಿಕ ಅಂತಿಮವಾಗಿ ಕೊಡಗು ವೃತ್ತದ ವ್ಯಾಪ್ತಿಯಲ್ಲಿ ಹಾದುಹೋಗುವ ವಿದ್ಯುತ್ ಲೈನ್‌ಗಳ ಸಂಬAಧವಾಗಿ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿ, ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡAತೆ ಪ್ರತಿ ವಲಯಗಳಿಗೆ ಸಂಬAಧಪಟ್ಟAತೆ ಅರಣ್ಯದೊಳಗೆ ಹಾಗೂ ಖಾಸಗಿ ಜಮೀನುಗಳ ಒಳಗೆ ಹಾದುಹೋಗಿರುವ ವಿದ್ಯುತ್ ಮಾರ್ಗಗಳನ್ನು ಪರಿಶೀಲನೆ ನಡೆಸಲು ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ.

ಜಿಲ್ಲೆಯಲ್ಲಿ ಸುಮಾರು ೨೦ಕ್ಕೂ ಅಧಿಕ ವಲಯಗಳು ಬರಲಿದ್ದು, ಪ್ರತಿ ವಲಯಕ್ಕೆ ೪ ತಂಡಗಳನ್ನು ರಚನೆ ಮಾಡಲಾಗಿದೆ. ನಿಯೋಜಿತ ಸಿಬ್ಬಂದಿಗಳು ಆಯಾ ವಲಯದಲ್ಲಿ ವಿದ್ಯುತ್ ಮಾರ್ಗಗಳ ಸ್ಥಿತಿ-ಗತಿಯನ್ನು ಅವಲೋಕಿಸಿ ಈ ಬಗ್ಗೆ ನಿಖರವಾದ ವರದಿಯನ್ನು ಸಲ್ಲಿಸಬೇಕಾಗಿದೆ. ಪ್ರತಿ ವಿದ್ಯುತ್ ಲೈನ್‌ಗಳ ಪರಿಶೀಲನೆ ಕಾರ್ಯ ಆಗಸ್ಟ್ ೨ ರಿಂದ ಆರಂಭಗೊAಡು

(ಮೊದಲ ಪುಟದಿಂದ) ತಾ. ೫ರ ತನಕ ಮುಂದುವರಿಸಲು ಸೂಚನೆ ನೀಡಲಾಗಿದೆ. ಪರಿಶೀಲನೆ ಬಳಿಕ ವಾಸ್ತವ ವರದಿಯನ್ನು ನೀಡಲು ಸಮಯ ನಿಗದಿಪಡಿಸಲಾಗಿದೆ.

ಎರಡು ಇಲಾಖೆಗಳ ಸಿಬ್ಬಂದಿಗಳ ತಂಡ ವರದಿಯನ್ನು ಆಯಾ ಇಲಾಖೆಗೆ ನೀಡಬೇಕಾಗಿದ್ದು, ವರದಿ ಬಳಿಕ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಸೆಸ್ಕ್ನ ಮೈಸೂರು ವಿಭಾಗದ ಮುಖ್ಯ ಅಭಿಯಂತರರಾದ ಉಮೇಶ್ ಚಂದ್ರ, ಜಿಲ್ಲೆಯ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಟಿ. ಪೂವಯ್ಯ, ವನ್ಯಜೀವಿ ವಿಭಾಗದ ಶಿವರಾಮ್ ಬಾಬು ಸೇರಿದಂತೆ ಎರಡು ಇಲಾಖೆಗಳ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.