ಮಡಿಕೇರಿ, ಜು. ೩೦: ಭಾಷೆಗಳು ಹಲವು ರೀತಿಯ ಸ್ವರೂಪಗಳನ್ನು ಹೊಂದಿವೆ. ಊರಿಂದ ಊರಿಗೆ ಭಾಷ ಪ್ರಯೋಗ, ಶೈಲಿ ಬದಲಾಗುತ್ತದೆ. ಪದಗಳೇ ಭಾಷೆಯ ಜೀವಾಳವಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಪಕರಾದ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.

ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಅರೆಭಾಷೆ ಪದಕೋಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಸಂಭವಗಳಿಗೆ ಕೊಡಗು ಜಿಲ್ಲೆ ಮೂಲ ವಾಗಿದೆ. ಇಲ್ಲಿನ ಹಿನ್ನೆಲೆ, ಶ್ರೀಮಂತ ಸಂಸ್ಕೃತಿ, ಅಪೂರ್ವ ಕೃತಿಗಳು, ಐತಿಹಾಸಿಕ ದಾಖಲೆಗಳು ಇಲ್ಲಿನ ಬಹು ಧರ್ಮ, ವಿಭಿನ್ನ ಸಂಸ್ಕೃತಿ, ಭಾಷಾಭಿಮಾನಕ್ಕೆ ಸಾಕ್ಷಿಯಾಗಿದೆ. ಭಾರತ ವಿವಿಧ ಭಾಷೆ, ಸಂಸ್ಕೃತಿಯ ವೈವಿದ್ಯ ಹೊಂದಿರುವ ನೆಲವಾಗಿದೆ. ಊರಿಂದ ಊರಿಗೆ ಸಂಸ್ಕೃತಿ, ಭಾಷೆ ಹಿನ್ನೆಲೆಯಲ್ಲಿ ವ್ಯತ್ಯಾಸವಿದೆ. ಒಂದು ಪದ ಬೇರೆ ಬೇರೆ ಕಡೆಗಳಲ್ಲಿ ವಿವಿಧ ಅರ್ಥ, ಸ್ವರೂಪ ಪಡೆದುಕೊಳ್ಳುತ್ತದೆ. ಅಧುನಿಕತೆಯ ನಡುವೆ ದೇಶದಲ್ಲಿ ಬಹುತ್ವ ವಿನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.

ಮದುವೆ ಸೇರಿದಂತೆ ಇನ್ನಿತರ ಶುಭಸಮಾರಂಭಗಳು ಇತ್ತೀಚಿಗೆ ಒಂದೇ ರೀತಿಯಲ್ಲಿ ನಡೆಯುತ್ತಿ ರುವುದು ಅಧುನಿಕತೆಯ ಪ್ರಭಾವವೇ ಕಾರಣವಾಗಿದೆ. ಕಾರ್ಯಕ್ರಮಗಳು ಸಂಸ್ಕೃತಿಯಡಿ ನಡೆಯಬೇಕು ಹೊರತು ಶ್ರೀಮಂತಿಕೆ ತೋರಿಸಿಕೊಳ್ಳುವ ವೇದಿಕೆ ಯಾಗಬಾರದು. ಯುವಸಮುದಾಯಕ್ಕೆ ಪದ್ಧತಿ, ಪರಂಪರೆ, ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿಸುವ ಪ್ರಯತ್ನ ಮಾಡಬೇಕು. ಆಚರಣೆ, ಆರಾಧನೆಗಳು ಸಂಸ್ಕೃತಿಯ ಧ್ಯೋತಕವಾಗಿದೆ ಎಂದು ಹೇಳಿದ ಅವರು, ಪ್ರಾದೇಶಿಕ ಭಾಷೆಗೆ ಮನ್ನಣೆ ನೀಡಬೇಕು ಹಾಗೂ ಪದಗಳ ಉಳಿಯಬೇಕು ಎಂಬ ನಿಟ್ಟಿನಲ್ಲಿ ಪದಕೋಶವನ್ನು ತಯಾರು ಮಾಡಿರುವುದು ಶ್ಲಾಘನೀಯ. ಕೆಟಲ್ ಕನ್ನಡ ನುಡಿ ಮೆಚ್ಚಿ ಪದಕೋಶ ರಚಿಸಿದ್ದು ಇದೀಗ ಇತಿಹಾಸವಾಗಿದೆ. ಹಾಗೆಯೇ

(ಮೊದಲ ಪುಟದಿಂದ) ಅರೆಭಾಷೆ ಅಕಾಡೆಮಿಯ ಪ್ರಯತ್ನ ಇಂದು ಮನ್ನಣೆ ಜೊತೆಗೆ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪದಕೋಶವನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಲು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೋಶ ರಚನೆ ಸುಧೀರ್ಘ ಹಾಗೂ ಶಾಸ್ತಿçÃಯವಾಗಿ ನಡೆದುಕೊಂಡು ಬಂದಿದೆ. ಅಕಾಡೆಮಿ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಹಿನ್ನೆಲೆ ಕೋಶ ಬೇಗನೆ ಬಿಡುಗಡೆಗೊಂಡಿದೆ. ಕೋಶದಲ್ಲಿ ಸ್ಥಳನಾಮ ಸೇರಿಸಿರುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕೋಶದಲ್ಲಿ ಬಳಕೆಗೆ ಯೋಗ್ಯವಾದ ಪದಗಳು ಇವೆ. ಪ್ರತಿಯೊಬ್ಬರ ಮನೆಯಲ್ಲಿ ಕೋಶ ಇರಬೇಕು. ಪದಗಳ ಬಗ್ಗೆ ಸಂಶಯ ವ್ಯಕ್ತವಾದರೆ ಕೋಶದ ನೆರವು ಪಡೆಯಬಹುದು ಎಂದರು.

ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ೧೮ ಸಾವಿರ ಪದಗಳನ್ನು ಸಂಗ್ರಹಿಸಿ ಅರೆಭಾಷೆ ಜನಾಂಗಕ್ಕೆ ಅಕಾಡೆಮಿ ಉತ್ತಮ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಅಕಾಡೆಮಿ ರಚನೆಯಾಗಿ ೧೦ ವರ್ಷಗಳಲ್ಲಿ ಈ ಬಾರಿಯ ಆಡಳಿತ ಮಂಡಳಿ ಅತ್ಯಂತ ಪರಿಣಾಮಕಾರಿಯಾಗಿ ಭಾಷೆ ಹಾಗೂ ಸಂಸ್ಕೃತಿ ಉಳಿವು, ಬೆಳವಣಿಗೆಗೆ ಕೆಲಸ ಮಾಡಿದೆ. ಸಂಸ್ಕೃತಿ, ಜನಾಂಗ ಉಳಿಯಬೇಕಾದರೆ ಭಾಷೆ ಉಳಿಯಬೇಕು. ಯುವಜನಾಂಗ ಬೇರೆಡೆಗಳಿಗೆ ತೆರಳಿದ ನಂತರ ಭಾಷೆಯ ಬಳಕೆ ಕಡಿಮೆ ಮಾಡುತ್ತಿರುವುದು ವಿಷಾದನೀಯ. ಭಾಷೆ ನಾಶವಾದರೆ ಜನಾಂಗವೇ ನಾಶವಾಗುತ್ತದೆ. ಭಾಷೆಯನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ, ತಂಡವಾಗಿ ಕೆಲಸ ಮಾಡಿದ ಹಿನ್ನೆಲೆ ಕ್ಷಿಪ್ರಗತಿಯಲ್ಲಿ ಇಷ್ಟು ದೊಡ್ಡ ಮಟ್ಟದ ಕೆಲಸ ಸಾಧ್ಯವಾಯಿತು. ಅಧಿಕಾರಿಗಳು ಕೂಡ ಪೂರಕ ಸಹಕಾರ ನೀಡಿದ್ದಾರೆ. ಪುಸ್ತಕ ಕಟ್ಟುವ ಕಥೆ ದೊಡ್ಡದು. ಹಲವರ ಶ್ರಮದಿಂದ ನಿಗದಿತ ಕಾಲಮಿತಿಯೊಳಗೆ ಕೋಶ ಬಿಡುಗಡೆಯಾಗಿದೆ. ಯೂನಿಕೋಡ್‌ನಲ್ಲಿ ತಯಾರದ ಮೊದಲ ಕೋಶ ಇದಾಗಿದ್ದು, ಭಾಷ ತಜ್ಞರೊಂದಿಗೆ ನಿರಂತರ ಸಮಾಲೋಚನೆ, ಸಲಹೆ, ಮಾರ್ಗದರ್ಶನದಿಂದ ಉತ್ತಮ ಗುಣಮಟ್ಟದ ಕೋಶ ಹೊರಬಂದಿದೆ ಎಂದು ಹೇಳಿದರು.

ಕೋಶದ ಸಂಪಾದಕ ಡಾ.ವಿಶ್ವನಾಥ ಬದಿಕಾನ ಮಾತನಾಡಿ, ಹಲವು ಸವಾಲಿನ ನಡುವೆ ಕೋಶ ತಯಾರಿಸಲಾಗಿದೆ. ಇದಕ್ಕಾಗಿ ನಿರಂತರ ಅಧ್ಯಯನ ನಡೆಸಲಾಗಿದೆ. ಪದಗಳ ವಿಂಗಡಣೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಯುವ ತಂಡ ನಾಲ್ಕು ತಿಂಗಳು ಕ್ಷೇತ್ರ ಕಾರ್ಯ ನಡೆಸಿ ಪದಗಳನ್ನು ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದರು.

ಗೌಡ ಸಮಾಜ ಒಕ್ಕೂಟದ ನಿರ್ದೇಶಕ ತೇನನ ರಾಜೇಶ್, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಮಾತನಾಡಿದರು.

ಇದೇ ಸಂದರ್ಭ ಕೋಶ ರಚನೆಗೆ ಕ್ಷೇತ್ರಕಾರ್ಯ ಮಾಡಿದವರನ್ನು ಹಾಗೂ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ಕೆ.ಟಿ. ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ, ಸ್ಮಿತಾ ಅಮೃತರಾಜ್, ಕುಸುಮಾಧರ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಡಾ. ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ್ ಆಲಸಂಡೆಮಜಲು ಹಾಜರಿದ್ದರು.

ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿ, ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ ಸ್ವಾಗತಿಸಿ, ಧನಂಜಯ ಆಗೋಳಿಕಜೆ ನಿರೂಪಿಸಿ, ಡಾ. ಕೂಡಕಂಡಿ ದಯಾನಂದ್ ವಂದಿಸಿದರು.