ಮಡಿಕೇರಿ, ಜು. ೩೦: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಜಿಲ್ಲೆಯ ಯುವತಿ ಅರೆಯಡ ಕೃತಿಕಾ ದೇವಯ್ಯ ಹೊರಹೊಮ್ಮಿದ್ದಾರೆ. ಈ ಹಿಂದೆ ಆರ್ಮಿ ಆಫೀಸರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ದ್ವಿತೀಯ ರ‍್ಯಾಂಕ್‌ನ ಸಾಧನೆ ಮಾಡಿದ್ದ ಕೃತಿಕಾ ಇದೀಗ ಚೆನ್ನೆöÊಯ ಆಫೀರ‍್ಸ್ ಟ್ರೆöÊನಿಂಗ್ ಅಕಾಡೆಮಿಯಲ್ಲಿ ಯಶಸ್ವಿ ತರಬೇತಿ ಪೂರೈಸಿದ್ದು, ಲೆಫ್ಟಿನೆಂಟ್ ಅಧಿಕಾರಿಯಾಗಿ ಆಯ್ಕೆಗೊಂಡಿದ್ದಾರೆ. ಇಂದು ಚೆನ್ನೆöÊಯಲ್ಲಿ ಪಾಸಿಂಗ್ ಔಟ್ ಪೆರೇಡ್ ನಡೆಯಿತು. ಈ ಸಂದರ್ಭ ಕೃತಿಕಾ ಅವರ ಪೋಷಕರಾದ ಯವಕಪಾಡಿಯವರಾದ ತಂದೆ ಅರೆಯಡ ಜೀವನ್ ದೇವಯ್ಯ, ತಾಯಿ ಶಿಕ್ಷಕಿಯಾಗಿರುವ ಬಬಿತ (ತಾಮನೆ ಪೆಮ್ಮಡಿಯಂಡ), ಸಹೋದರ ಶರಣ್ ಮುತ್ತಣ್ಣ, ಸಂಬAಧಿ ಅಶ್ವಿನಿ ಪಾಲ್ಗೊಂಡಿದ್ದರು. ಕೃತಿಕಾ ಈ ಹಿಂದೆ ಎನ್‌ಸಿಸಿಯಲ್ಲೂ ಉತ್ತಮ ಸಾಧನೆ ತೋರಿದ್ದಾಳೆ. ರಿಪಬ್ಲಿಕ್‌ಡೇ ಪೆರೇಡ್ ಹಾಗೂ ಈ ಮೂಲಕ ಭಾರತದ ರಾಯಭಾರಿ ಯಾಗಿ ಯೂತ್ ಎಕ್ಸ್ಚೇಂಜ್ ಪ್ರೋಗ್ರಾಮ್‌ನಲ್ಲಿ ವಿಯೆಟ್ನಾಂಗೂ ತೆರಳಿದ್ದರು.