ಕೂಡಿಗೆ, ಜು. ೩೧: ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಾಗರ ಪಂಚಮಿ ಪ್ರಯುಕ್ತ ತಾ ೨. ರಂದು ನಾಗರ ಪಂಚಮಿಯ ಪೂಜಾ ಕಾರ್ಯಕ್ರಮ ನಡೆಯಲಿದೆ. ಅಂದು ಸುಬ್ರಹ್ಮಣ್ಯ ಸ್ವಾಮಿಗೆ ಬೆಳಿಗ್ಗೆನಿಂದಲೇ ಪಂಚಾಮೃತ ಅಭಿಷೇಕ , ಗಣಪತಿ ಪೂಜೆ, ಸರ್ಪಶಾಂತಿ ಹೋಮ, ೧೨ ಗಂಟೆಗೆ ಪೂಣಾಹುತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದು, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.