ಗೋಣಿಕೊಪ್ಪಲು, ಜು. ೩೧: ಅರುವತ್ತೊಕ್ಕಲು ಹಾಗೂ ಹಾತೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕುಂದ, ಈಚೂರು, ಹಳ್ಳಿಗಟ್ಟು, ಹುದೂರು ಒಳಗೊಂಡAತೆ ಈ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಇತ್ಯಾದಿ ಫಸಲುಗಳು ನೆಲಕಚ್ಚಿರುವದಾಗಿ ಶ್ರೀ ದಬ್ಬೆಚಮ್ಮೆ ಜನ ಸಾಮಾನ್ಯರ ಸೇವಾ ಸಂಘದ ಅಧ್ಯಕ್ಷ ಪಟ್ರಂಗಡ ಬೋಸ್ ತಿಳಿಸಿದ್ದಾರೆ.
ಗಾಳಿ ಮಳೆಗೆ ಈ ಭಾಗದ ಸುಮಾರು ೨೦೦ಕ್ಕೂ ಅಧಿಕ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತಾಪಿ ವರ್ಗ ನಷ್ಟ ಅನುಭವಿಸಿದ್ದಾರೆ. ಕುಂದ ವ್ಯಾಪ್ತಿಯಲ್ಲಿ ಈವರೆಗೆ ೬೫ ಇಂಚಿಗೂ ಅಧಿಕ ಮಳೆ ದಾಖಲಾಗಿದ್ದು, ಕೆಲವೇ ದಿನ ಸುರಿದ ರಭಸದ ಮಳೆಗೆ ಫಸಲು ನೆಲಕಚ್ಚಿ ಕೃಷಿಕರು ತೀವ್ರ ನಷ್ಟ ಅನುಭವಿಸಿರುವದಾಗಿ ಹೇಳಿದ್ದಾರೆ.
ಫಸಲು ಹಾನಿ ಸಂಭವಿಸಿ ಹಲವು ದಿನಗಳೇ ಆದರೂ ಈ ಭಾಗಕ್ಕೆ ಕಾಫಿ ಮಂಡಳಿ ಅಧಿಕಾರಿಗಳು, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈವರೆಗೂ ಭೇಟಿ ನೀಡಿಲ್ಲ ಎಂದು ಆರೋಪಿಸಿದ ಅವರು ಕೂಡಲೇ ಸಂಬAಧಿಸಿದ ಅಧಿಕಾರಿಗಳು ಭೇಟಿ ನೀಡಲು ಒತ್ತಾಯಿಸಿದ್ದಾರೆ.