ವೀರಾಜಪೇಟೆ. ಜು. ೩೧: ಕೇರಳದ ಎರ್ನಾಕುಲಮ್‌ನಲ್ಲಿ ಶನಿವಾರ ಮುಂಜಾನೆ ಉಂಟಾದ ರಸ್ತೆ ಅಪಘಾತದಲ್ಲಿ ವೀರಾಜಪೇಟೆ ಸಮೀಪದ ಪೆರಂಬಾಡಿಯ ರಫೀಕ್ ಎಂಬವರ ಪುತ್ರ ಆಶಿಫ್ (೨೯) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆಶಿಫ್ ತಮ್ಮ ಬೈಕ್‌ನಲ್ಲಿ ಕೆಲಸದ ನಿಮಿತ್ತ ಬರುತ್ತಿದ್ದಾಗ ಕೇರಳ ರಸ್ತೆ ಸಾರಿಗೆ ನಿಗಮದ ಬಸ್‌ಗೆ ಡಿಕ್ಕಿಯಾಗಿದೆ. ಈ ಹಿಂದೆ ಕೊಲ್ಲಿ ರಾಷ್ಟçದಲ್ಲಿ ಉದ್ಯೋಗದಲ್ಲಿದ್ದ ಆಶಿಫ್ ಎರಡು ತಿಂಗಳುಗಳಿAದ ಎರ್ನಾಕುಲಮ್‌ನಲ್ಲಿ ಆಹಾರ ಉತ್ಪಾದನಾ ಸಂಸ್ಥೆಯಲ್ಲಿ ವಿತರಕರಾಗಿ ದುಡಿಯುತ್ತಿದ್ದರು. ಇತ್ತೀಚೆಗಷ್ಟೆ ವಿವಾಹಿತರಾದ ಇವರು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.