ಗೋಣಿಕೊಪ್ಪಲು, ಜು. ೩೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ವನ್ಯ ಉಪವಿಭಾಗ ಕಲ್ಲಳ್ಳ ಇವರ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ದಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ‘ಜೇನು ಸಾಕಾಣೆ’ ಹಾಗೂ ಅಣಬೆ ಕೃಷಿ ತರಬೇತಿ ಕಾರ್ಯಾಗಾರ’ ನಿಟ್ಟೂರು ಪಂಚಾಯಿತಿ ಸಭಾಂಗಣ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಗಿರಿಜನರು ಅಣಬೆ ಹಾಗೂ ಜೇನು ಕೃಷಿಯ ಮೂಲಕ ತಮ್ಮ ಆರ್ಥಿಕತೆಯನ್ನು ಉತ್ತಮಪಡಿಸಿ ಕೊಳ್ಳಲು ಇಂತಹ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕವಿತ ಪ್ರಭು, ಗ್ರಾ.ಪಂ. ಸದಸ್ಯ ಚೆಕ್ಕೇರ ಸೂರ್ಯ, ನಾಗರಹೊಳೆ ಅಭಯಾರಣ್ಯ ನಿರ್ದೇಶಕ ಹರ್ಷಕುಮಾರ್ ಎಸಿಎಫ್ ಗೋಪಾಲ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಿರಿಜನರಿಗೆ ಜೇನು ಪೆಟ್ಟಿಗೆ ಹಾಗೂ ಅಣಬೆ ಕೃಷಿಗೆ ಬೇಕಾದ ವಸ್ತುಗಳನ್ನು ವಿತರಿಸಲಾಯಿತು.