ಮಡಿಕೇರಿ, ಜು. ೩೦: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಆ. ೬ ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ‘ಕಲಾ ವೈಭವ' ಉತ್ಸವ ಆಯೋಜಿಸಲಾಗಿದ್ದು, ಇದರ ಪ್ರಯುಕ್ತ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮಹದೇವಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಲಾಂಛನ ಅನಾವರಣಗೊಳಿಸಿ, ಮಾತನಾಡಿದ ಅವರು ಪ್ರತಿಭೆ ಮತ್ತು ಅವಕಾಶದ ಸಂಗಮ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯ ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿರುವ ಅಪ್ರತಿಮ ಪ್ರತಿಭೆಗಳನ್ನು ಗುರುತಿಸಿ, ಅನಾವರಣಗೊಳಿಸಲು ಮತ್ತು ಉತ್ತೇಜಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಡೀನ ಮಾತನಾಡಿ, ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.
ಛಾಯಾಕೃತಿ ಸ್ಪರ್ಧೆ ರೀಲ್ ಎನ್ ರೋಲ್, ಅಲಂಕಾರ್, ಆಶುಕವಿ, ಬಕಾಸುರ, ಇನ್ಫಿನಿಟಿ ವಾರ್(ಟರ್ನ್ ಕೋರ್ಟ್), ಟಿಖರ್ ಟೇಪ್, ಬಿಗ್ ವಿಂಗ್ (ಬೆಸ್ಟ್ ಹೆಚ್.ಆರ್. ಮ್ಯಾನೇಜರ್), ಮ್ಯಾಡ್ ಆ್ಯಡ್, ಥೀಮ್ ಡ್ಯಾನ್ಸ್, ಸಪ್ರೆöÊಸ್ ಈವೆಂಟ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ೯೩೫೩೩೭೬೩೫೪, ೯೫೯೧೧೫೭೮೯೨, ೯೬೧೧೨೫೦೬೦೬ ಸಂಖ್ಯೆಯನ್ನು ಸಂಪರ್ಕಿಸುವAತೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ. ಬಿ.ರಾಘವ, ಬಿ.ಆರ್.ಪ್ರದೀಪ್, ವಿದ್ಯಾರ್ಥಿ ಸಂಯೋಜಕರಾದ ಕೆ.ಆರ್.ದಿಶಾಂತ್, ಎಸ್.ಸುಮನ್ ಉಪಸ್ಥಿತರಿದ್ದರು.