ವೀರಾಜಪೇಟೆ, ಜು. ೨೮: ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ಖಂಡಿಸಿ, ಸಿ.ಪಿ.ಐ.ಎಮ್ ಸಂಘಟನೆ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿತು.
ಈ ಸಂದÀರ್ಭ ಮಾತನಾಡಿದ ಸಿ.ಪಿ.ಐ.ಎಮ್ ವೀರಾಜಪೇಟೆ ಘಟಕದ ಸಾಜಿ ರಮೇಶ್, ಕೇಂದ್ರ ಸರ್ಕಾರ ಬಡವರು ಮತ್ತು ರೈತರು ಬಳಸುವ ಅಗತ್ಯ ವಸ್ತುಗಳ ಮೇಲೆ ತೆರಿಗೆಯನ್ನು ಹೆಚ್ಚಿಸಿ ತೊಂದರೆ ನೀಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ. ರಮೇಶ್ ಮಾತನಾಡಿ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಯುವ ಪೀಳಿಗೆ ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಜಿಎಸ್‌ಟಿ ಹೇರಿಕೆ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಸಿ.ಪಿ.ಐ.ಎಮ್. ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಪದ್ಮಿನಿ, ವೀರಾಜಪೇಟೆ ಘಟಕದ ಪ್ರಮುಖರಾದ ಕೆ.ಎಸ್. ರಧೀಶ್, ಬಾಬುಟಿ, ಹರಿದಾಸ್ ಸೇರಿದಂತೆ ಪಕ್ಷದ ಸದಸ್ಯರು ಹಾಜರಿದ್ದರು.