ಸೋಮವಾರಪೇಟೆ, ಜು. ೨೯: ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಓದಿದ ಶಾಲೆಗೆ ಸಹಾಯ ಮಾಡುವ ಪರಿಪಾಠ ಬೆಳೆಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ರೋಟರಿ ಮಾಜಿ ಅಧ್ಯಕ್ಷ ಡಾ. ರಾಕೇಶ್ ಪಟೇಲ್ ಹೇಳಿದರು.
ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಕೆ. ಲಕ್ಷಿö್ಮ ಅವರ ಶಿಷ್ಯವೃಂದ ನೀಡಿರುವ ಶಾಲೆಗೆ ಅಗತ್ಯವಿರುವ ರೂ. ೨೫,೫೦೦ ಮೌಲ್ಯದ ಸ್ಪೀಕರ್ ಮತ್ತು ಸೌಂಡ್ಸಿಸ್ಟಮ್ ಸೇರಿದಂತೆ ಹಲವು ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಕೆ. ಲಕ್ಷಿö್ಮ ಅವರ ಶಿಷ್ಯವೃಂದ ನೀಡಿರುವ ಶಾಲೆಗೆ ಅಗತ್ಯವಿರುವ ರೂ. ೨೫,೫೦೦ ಮೌಲ್ಯದ ಸ್ಪೀಕರ್ ಮತ್ತು ಸೌಂಡ್ಸಿಸ್ಟಮ್ ಸೇರಿದಂತೆ ಹಲವು ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಕೆ. ಲಕ್ಷಿö್ಮ ಅವರ ಶಿಷ್ಯವೃಂದ ನೀಡಿರುವ ಶಾಲೆಗೆ ಅಗತ್ಯವಿರುವ ರೂ. ೨೫,೫೦೦ ಮೌಲ್ಯದ ಸ್ಪೀಕರ್ ಮತ್ತು ಸೌಂಡ್ಸಿಸ್ಟಮ್ ಸೇರಿದಂತೆ ಹಲವು ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡುವ ಮೂಲಕ ದೇಶದ ಸತ್ಪçಜೆಗಳಾಗಬೇಕು. ಅಲ್ಲದೇ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಉನ್ನತ ಸ್ಥಾನವನ್ನು ಪಡೆದುಕೊಂಡ ನಂತರ ಊರಿನ ಅಭಿವೃದ್ಧಿ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಹಾಗಾದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.
ಜ್ಞಾನವಿಕಾಸ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶ್, ಪ್ರೌಢಶಾಲೆ ವಿಭಾಗದ ಪ್ರಥಮ ವಿದ್ಯಾರ್ಥಿ ಅಪಾಡಂಡ ಪ್ರಿಯದರ್ಶನ್, ಮುಖ್ಯೋಪಾ ಧ್ಯಾಯಿನಿ ಲಕ್ಷಿö್ಮಯವರ ಶಿಷ್ಯಂದಿರು ಮತ್ತು ದಾನಿಗಳಾದ ಶಮೀಲ್ ವಜೀರ್, ರೂಪ ಮಹೇಶ್, ಚರಿತ, ಸರಿತ, ಮಧುಮತಿ, ಪ್ರಶಾಂತ್ ವೇದಿಕೆಯಲ್ಲಿ ಇದ್ದರು.
ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ. ಚಂದ್ರಾಜು, ನಿರ್ದೇಶಕರುಗಳಾದ ಹೆಚ್.ಸಿ. ನಾಗೇಶ್, ಎ.ಎಸ್. ಮಹೇಶ್, ಮಾಜಿ ಕಾರ್ಯದರ್ಶಿ ಡಾ. ವಸಂತ್ ಇದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷಿö್ಮ ಸ್ವಾಗತಿಸಿ, ಶಿಕ್ಷಕಿ ಗಾಯನ ನಿರೂಪಿಸಿದರೆ, ಕವಿತ ವಂದಿಸಿದರು.