ಕುಶಾಲನಗರ, ಜು.೨೮: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಮುಖ್ಯ ರಸ್ತೆಯ ಡೆಂಟಲ್ ಕ್ಲಿನಿಕ್‌ವೊಂದರ ಬಾಗಿಲು ಮುರಿದು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಪ್ರಕರಣ ನಡೆದಿದೆ.
ಕೊಪ್ಪ ಮುಖ್ಯ ರಸ್ತೆಯಲ್ಲಿರುವ ಡಾ.ರಾಘವೇಂದ್ರ ಅವರ ಕ್ಲಿನಿಕ್‌ನಲ್ಲಿ ಕಳ್ಳತನ ನಡೆದಿದ್ದು, ಬುಧವಾರ ರಾತ್ರಿ ಕಳ್ಳರು ನುಗ್ಗಿ ರೋಲಿಂಗ್ ಶೆಟರ್ ಬೀಗ ಒಡೆದು ಸಿಸಿ ಕ್ಯಾಮರಾದ ಹಾರ್ಡ್ಡಿಸ್ಕ್, ಅಲ್ಪ ಪ್ರಮಾಣದ ನಗದು ಮತ್ತು ಬೆಲೆ ಬಾಳುವ ಜನರೇಟರ್ ಕಳ್ಳತನ ಮಾಡಿದ್ದಾರೆ. ಎಂದಿನAತೆ ಬೆಳಿಗ್ಗೆ ಸಿಬ್ಬಂದಿಗಳು ಕ್ಲಿನಿಕ್‌ಗೆ ಬಂದ ಸಂದರ್ಭ ಬಾಗಿಲು ಮುರಿದಿರುವುದು ಗೋಚರಿಸಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ಡಾ.ರಾಘವೇಂದ್ರ ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಮಹಜರು ನಡೆಸಿ ಕ್ರಮಕೈಗೊಂಡಿದ್ದಾರೆ.