ಮಡಿಕೇರಿ, ಜು. ೨೯: ದಕ್ಷಿಣ ಅಮೇರಿಕಾದ ಕೊಲಂಬಿಯಾದಲ್ಲಿ ಆಗಸ್ಟ್ ೧ ರಿಂದ ೬ರವರೆಗೆ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ (೨೦ ವರ್ಷದೊಳಗಿನ ವಿಭಾಗ) ಜಿಲ್ಲೆಯ ಬಲ್ಯಮೀದೇರಿರ ಆರ್ಯನ್ ಜೋಯಪ್ಪ ಆಯ್ಕೆಯಾಗಿದ್ದಾರೆ. ಈ ವಿಭಾಗದಲ್ಲಿ ೪೦೦ ಮೀಟರ್ ಹರ್ಡಲ್ಸ್ನಲ್ಲಿ ಆರ್ಯನ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಗುಜರಾತ್ನಲ್ಲಿ ನಡೆದ ರಾಷ್ಟಿçÃಯ ಕ್ರೀಡಾಕೂಟದಲ್ಲಿನ ಸಾಧನೆಯೊಂದಿಗೆ ಇವರು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಆರ್ಯನ್ ಮೂಲತಃ ಬಾಡಗರಕೇರಿ ಪೊರಾಡು ಗ್ರಾಮದ ಬಲ್ಯಮೀದೇರಿರ ನಂದಾ ಜೋಯಪ್ಪ ಹಾಗೂ ರಾಷ್ಟಿçÃಯ ಅಥ್ಲೆಟ್ ರೈಲ್ವೇಸ್ನ ಉದ್ಯೋಗಿ ಸರೋಜ (ತಾಮನೆ - ಚನಿಯಪಂಡ) ದಂಪತಿಯ ಪುತ್ರ. ಪ್ರಸ್ತುತ ಮೈಸೂರಿನ ಮೈಕಾ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.