ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್‌ಐಎಗೆ ವಹಿಸಲು ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು, ಜು. ೨೯: ಕಳೆದ ಎರಡು ದಿನಗಳ ಹಿಂದೆ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟಿçÃಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಆರ್ಗನೈಸಡ್ ಕ್ರೆöÊಂ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ ಎಂದರು. ಈ ಪ್ರಕರಣ ಎರಡು ರಾಜ್ಯಕ್ಕೆ ಸಂಬAಧಿಸಿದ್ದಾಗಿದೆ. ಪ್ರಕರಣಕ್ಕೆ ಸಂಬAಧಿಸಿ ದಂತೆ ಎನ್‌ಐಎಗೆ ಲೆಟರ್ ಬರೆಯೋದಕ್ಕೆ ಹೇಳಿದ್ದೇನೆ. ಪ್ರಕರಣವನ್ನು ಎನ್‌ಐಎಗೆ ವಹಿಸಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಹೇಳಿದರು. ಕೇರಳ ಬಾರ್ಡರ್‌ನಲ್ಲಿ ಸಿಸಿಟಿವಿ ಅಳವಡಿಸಿ, ಚೆಕ್‌ಪೋಸ್ಟ್ ಹಾಕಿ ಸರ್ವೈಲನ್ಸ್ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸೂಕ್ಷö್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ. ಕೆಎಸ್‌ಆರ್‌ಪಿ ಬೆಟಾಲಿಯನ್ (ತುಕಡಿ) ದಕ್ಷಿಣ ಕನ್ನಡದಲ್ಲಿ ನೇಮಕ ಮಾಡಲು ಸೂಚನೆ ನೀಡಲಾಗಿದೆ. ರಾತ್ರಿ ಹೊತ್ತು ಹೆಚ್ಚು ದಸ್ತು ತಿರುಗಲು ಪೋಲಿಸರಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
‘ರಾಷ್ಟçಪತ್ನಿ’ ಹೇಳಿಕೆ: ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ
ನವದೆಹಲಿ, ಜು. ೨೯: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ತಮ್ಮ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಈ ಸಂಬAಧ ರಾಷ್ಟçಪತಿಗಳಿಗೆ ಬರೆದ ಪತ್ರದಲ್ಲಿ ಅಧೀರ್ ರಂಜನ್ ಚೌಧರಿ ಅವರು ತಾವು ತಪ್ಪಾಗಿ ರಾಷ್ಟçಪತ್ನಿ ಪದ ಬಳಸಿದ್ದು, ಬಾಯಿ ತಪ್ಪಿನಿಂದಾಗಿದೆ ಎಂದು ಹೇಳಿದ್ದಾರೆ. ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ತಪ್ಪು ಪದವನ್ನು ಬಳಸಿದ್ದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇನೆ. ಇದು ಬಾಯಿ ತಪ್ಪಿನಿಂದಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಕ್ಷಮೆಯಾಚಿಸುತ್ತೇನೆ ಮತ್ತು ಅದನ್ನು ಸ್ವೀಕರಿಸಲು ವಿನಂತಿಸುತ್ತೇನೆ ಎಂದು ಚೌಧರಿ ತಮ್ಮ ಪತ್ರದಲ್ಲಿ ರಾಷ್ಟçಪತಿಗಳಿಗೆ ಹೇಳಿದ್ದಾರೆ. ವಿಜಯ್ ಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ರಾಷ್ಟçಪತಿ ಮುರ್ಮು ಅವರಿಗೆ ‘ರಾಷ್ಟçಪತ್ನಿ' ಪದವನ್ನು ಬಳಸಿದ್ದರು, ಇದು ಆಡಳಿತಾರೂಢ ಬಿಜೆಪಿ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿ, ಚೌಧರಿ-ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.
‘ಹಾರುವ ಶವಪೆಟ್ಟಿಗೆ'ಗೆ ಗುಡ್ ಬೈ: ೨೦೨೫ ರ ವೇಳೆಗೆ ಎಲ್ಲಾ ಮಿಗ್-೨೧ ನಿವೃತ್ತಿಗೊಳಿಸಲು ಐಎಎಫ್ ಸಜ್ಜು
ನವದೆಹಲಿ, ಜು. ೨೯: ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ, ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾಗುತ್ತಿದ್ದ ರಷ್ಯಾ ನಿರ್ಮಿತ ಮಿಗ್- ೨೧ ಯುದ್ಧ ವಿಮಾನಗಳನ್ನು ಹಂತಹAತವಾಗಿ ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆಯಲು ಭಾರತೀಯ ವಾಯುಪಡೆ (ಐಎಎಫ್) ನಿರ್ಧರಿಸಿದ್ದು, ಸೆಪ್ಟೆಂಬರ್ ೩೦ ರೊಳಗೆ ಮಿಗ್-೨೧ ಬೈಸನ್ ವಿಮಾನದ ಮತ್ತೊಂದು ಸ್ಕಾ÷್ವಡ್ರನ್ ಹಾರಾಟ ನಿಲ್ಲಿಸಲಿದೆ. ನಿನ್ನೆ ಸಂಜೆಯಷ್ಟೇ ಐಎಎಫ್‌ನ ಎರಡು ಸೀಟರ್‌ನ ಮಿಗ್- ೨೧ ತರಬೇತಿ ವಿಮಾನವು ರಾಜಸ್ಥಾನದ ಬಾರ್ಮರ್‌ನಲ್ಲಿ ಪತನಗೊಂಡಿದ್ದು, ಈ ಭೀಕರ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಉತರ್ಲಾಲ್ ವಾಯು ನೆಲೆಯಿಂದ ತರಬೇತಿ ಭಾಗವಾಗಿ ಹಾರಾಟ ನಡೆಸುತ್ತಿದ್ದಾಗ ಈ ದುರದೃಷ್ಟಕರ ಘಟನೆ ನಡೆದಿದೆ. "ಶ್ರೀನಗರ ವಾಯುನೆಲೆಯಿಂದ ಹೊರಗಿರುವ ೫೧ ಸ್ಕಾ÷್ವಡ್ರನ್ ಅನ್ನು ಸೆಪ್ಟೆಂಬರ್ ೩೦ ರಂದು ಸ್ಥಗಿತಗೊಳಿಸಲಾಗುತ್ತಿದೆ. ಇದರ ನಂತರ, ಕೇವಲ ಮೂರು ಸ್ಕಾ÷್ವಡ್ರನ್ ವಿಮಾನಗಳು ಸೇವೆಯಲ್ಲಿ ಉಳಿಯುತ್ತವೆ ಮತ್ತು ಅವುಗಳನ್ನು ೨೦೨೫ ರ ವೇಳೆಗೆ ಹಂತಹAತವಾಗಿ ಸ್ಥಗಿತಗೊಳಿಸಲಾಗುವುದು" ಎಂದು ಐಎಎಫ್ ಮೂಲಗಳು ಎಎನ್‌ಐಗೆ ತಿಳಿಸಿವೆ. ಫೆಬ್ರವರಿ ೨೭, ೨೦೧೯ ರಂದು ಭಾರತ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದಾಗ ವಿಂಗ್ ಕಮಾಂಡರ್ (ಈಗ ಗ್ರೂಪ್ ಕ್ಯಾಪ್ಟನ್) ಅಭಿನಂದನ್ ವರ್ಧಮಾನ್ ಹಾರಿಸಿದ ಯುದ್ಧ ವಿಮಾನವನ್ನು ೫೧ ಸ್ಕಾ÷್ವಡ್ರನ್‌ನಿಂದ ತೆಗೆದುಕೊಳ್ಳಲಾಗಿತ್ತು. ಮಿಗ್-೨೧ ವಿಮಾನವು ಎಫ್-೧೬ ಅನ್ನು ವೈಮಾನಿಕ ದಾಳಿಯಲ್ಲಿ ಹೊಡೆದುರುಳಿಸಿದ ಏಕೈಕ ನಿದರ್ಶನ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ವಾಯುಪಡೆಯು ಮಿಗ್-೨೧ ಯುದ್ಧ ವಿಮಾನಗಳನ್ನು ಎಸ್ ಯು-೩೦ ಯುದ್ಧ ವಿಮಾನ ಮತ್ತು ಸ್ವದೇಶಿ ಲಘು ಯುದ್ಧ ವಿಮಾನ (ಎಲ್‌ಸಿಎ) ನಂತಹ ಹೆಚ್ಚು ಸಾಮರ್ಥ್ಯದ ವಿಮಾನಗಳೊಂದಿಗೆ ಬದಲಾಯಿಸುತ್ತಿದೆ.
ರೂ. ೩೮೨೯ ಕೋಟಿ ಬಂಡವಾಳ ಹೂಡಿಕೆಯ ಯೋಜನೆಗೆ ಅನುಮೋದನೆ
ಬೆಂಗಳೂರು, ಜು. ೨೯: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು, ರೂ. ೩೮೨೯.೪೬ ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು ೬೧ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ೧೩೩ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಒಟ್ಟು ೬೧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ರೂ. ೩೮೨೯.೪೬ ಕೋಟಿ ಮೊತ್ತದ ಹೊಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು ೧೯೧೫೦ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ. ರೂ. ೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು ೧೩ ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು ರೂ. ೨೯೭೯.೩೫ ಕೋಟಿ ಹೂಡಿಕೆಯಾಗಿ ೧೬೧೫೮ ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು. ಇದೇ ವೇಳೆ ರೂ. ೧೫ ಕೋಟೆಯಿಂದ ರೂ. ೫೦ ಕೋಟಿ ಒಳಗಿನ ೪೨ ಯೋಜನೆಗೆ ಹಸಿರು ನಿಶಾನೆಯನ್ನು ನೀಡಲಾಗಿದೆ. ರೂ. ೭೭೪.೫೧ ಕೋಟಿ ಹೂಡಿಕೆಯೊಂದಿಗೆ ೩೩೫೨ ಉದ್ಯೋಗ ಲಭಿಸಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು ೬ ಯೋಜನೆಯಿಂದ ರೂ. ೭೫.೬೦ ಕೋಟಿ ಹೂಡಿಕೆಯಾಗಲಿದೆ ಎಂದರು. ರಾಜ್ಯದಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಬಂದು ಎಲ್ಲಾ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯತ್ತ ಸಚಿವ ನಿರಾಣಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಉದ್ಯಮಿಗಳ ಆಕರ್ಷಣೆ, ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಆಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ.
ಹುಲಿ ಗಣತಿ ಕಾರ್ಯಕ್ಕೆ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿ
ಹುಬ್ಬಳ್ಳಿ:, ಜು. ೨೯ ಹುಲಿ ಗಣತಿ ಕಾರ್ಯ ಕಷ್ಟಸಾಧ್ಯ ಎನ್ನುವ ಇತರ ಹುಲಿ ಮೀಸಲು ಪ್ರದೇಶಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹುಲಿ ಮೀಸಲು ಪ್ರದೇಶ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಿತಾ ಪ್ರಾಧಿಕಾರ ಮತ್ತು ಭಾರತದ ವನ್ಯಜೀವಿ ಸಂಸ್ಥೆ ಹುಲಿ ಗಣತಿಗೆ ಅಳವಡಿಸಿರುವ ಶಿಷ್ಟಾಚಾರವನ್ನು ಕಾಳಿ ಮೀಸಲು ಪ್ರದೇಶ ಸರಿಯಾದ ರೀತಿಯಲ್ಲಿ ಅನುಸರಿಸುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸುಂದರವಾದ ಅರಣ್ಯ ಪ್ರದೇಶ ಮತ್ತು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಈ ಹಿಂದೆ ೨೦೧೮ರಲ್ಲಿ ನಡೆಸಲಾದ ಗಣತಿಯಲ್ಲಿ ೧೨ ಹುಲಿಗಳಿರುವುದಾಗಿ ಹೇಳಲಾಗಿತ್ತು. ಈ ಬಾರಿ ಕ್ಯಾಮರ್ ಟ್ರಾಪ್ ಪ್ರಯೋಗ ಮೂಲಕ ಹುಲಿ ಗಣತಿ ನಡೆಸಲಾಗುತ್ತಿದೆ. ಇದರಿಂದ ಮೀಸಲು ಪ್ರದೇಶದಲ್ಲಿರುವ ವಾಸ್ತವ ಹುಲಿಗಳ ಸಂಖ್ಯೆ ತಿಳಿಯಲು ನೆರವಾಗಲಿದೆ. ಕಾಳಿ ಹುಲಿ ಮೀಸಲು ಪ್ರದೇಶವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಇತರ ಅರಣ್ಯ ಪ್ರದೇಶಗಳಲ್ಲಿಯೂ ಗಣತಿ ನಡೆಸಲಾಗುತ್ತಿದೆ. ಯಲ್ಲಾಪುರ, ಶಿರಸಿ, ಹಳಿಯಾಳ ವಿಭಾಗದಿಂದಲೂ ಹುಲಿಗಳು ಇರುವ ಬಗ್ಗೆ ವರದಿಯಾಗಿದೆ. ಎನ್‌ಟಿಸಿಎ ಮತ್ತು ಭಾರತದ ವನ್ಯಜೀವಿ ಸಂಸ್ಥೆಯ ಶಿಷ್ಠಾಚಾರದಂತೆ ಹುಲಿ ಗಣತಿ ಕಾರ್ಯ ನಡೆಸಲಾಗುತ್ತದೆ. ಹುಲಿಗಳ ನಿಖರವಾದ ಸಂಖ್ಯೆ ತಿಳಿಯಲು ಸರಿಯಾಗಿ ಈ ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.