ಮಡಿಕೇರಿ, ಜು.೨೮: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಇಲಾಖೆ ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಕಂಚಿನ ಪದಕ ಪಡೆದುಕೊಳ್ಳುವದರೊಂದಿಗೆ ಸಾಧನೆ ಮಾಡಿದ್ದಾಳೆ.
ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಕೊಡಗು ತಂಡ ಪಾಲ್ಗೊಂಡಿದ್ದು, ನಾಲ್ವರು ವಿದ್ಯಾರ್ಥಿಗಳು, ಮೂವರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ಪೈಕಿ ದ್ವಿತೀಯ ಬಿಕಾಂನ ಪೃಥ್ವಿ ೪೯ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡು, ಜಿಲ್ಲೆಗೆ ಪದಕ ತಂದುಕೊಟ್ಟ ಮೊದಲ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. ಈಕೆ ಸಿದ್ದಾಪುರ ಬಳಿಯ ಮಟ್ಟ ಗ್ರಾಮದ ನಿವಾಸಿ ಕಾಮರಾಜ್ ಹಾಗೂ ಪ್ರೀತಾ ದಂಪತಿಯರ ಪುತ್ರಿ. ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದÀ ಪ್ರೊ.ಎವರೆಸ್ಟ್ ರೋಡ್ರಿಗಸ್ ಈಕೆಗೆ ತರಬೇತಿ ನೀಡಿದ್ದರು.