ಸೋಮವಾರಪೇಟೆ: ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಪುಟ್ಟಪ್ಪ ವೃತ್ತದಲ್ಲಿ ಅಳವಡಿಸಿದ್ದ ಅಮರ್ ಜವಾನ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಶಾಂತಿಪ್ರಿಯ ಭಾರತವು ಕಪಟಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಕಾರ್ಗಿಲ್ ಯುದ್ಧವನ್ನು ಯಾರೊಬ್ಬರೂ ಮರೆಯಬಾರದು. ದೇಶದ ಸೈನಿಕ ವ್ಯವಸ್ಥೆಗೆ ಹೊಸ ರೂಪ ನೀಡಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸುಧಾರಣಾ ಕ್ರಮಗಳಿಂದಾಗಿ ಯುದ್ಧದಲ್ಲಿ ಭಾರತದ ಸೈನಿಕರು ಜಯಗಳಿಸುವಂತಾಯಿತು ಎಂದರು.

ಯುದ್ಧ ಭೂಮಿಗೆ ತೆರಳಿ ಸೈನಿಕರಿಗೆ ಆತ್ಮಸ್ಥೆöÊರ್ಯ ತುಂಬಿದ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ವಾಜಪೇಯಿ ಅವರಿಗಿದೆ. ಈ ಯುದ್ಧದ ನಂತರ ದೇಶದ ಸೈನಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಯಿತು. ಹುತಾತ್ಮ ಯೋಧರ ಮೃತದೇಹವನ್ನು ಸ್ವಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ ಕೀರ್ತಿಯೂ ಆಗಿನ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ತಾಲೂಕು ಪ್ರಚಾರ ಪ್ರಮುಖ್ ಹೇಮಂತ್, ಪ್ರಮುಖರಾದ ಬನ್ನಳ್ಳಿ ಗೋಪಾಲ್, ಹೆಚ್.ಎನ್. ಅಶೋಕ್, ಬಾಲಕೃಷ್ಣ, ರತ್ನಕುಮಾರ್, ದಾಮೋಧರ್, ರವೀಂದ್ರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೇರಿದಂತೆ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಮಡಿಕೇರಿ: ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ನಗರದಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ಪ್ರಮುಖರು ಯೋಧರ ಬಲಿದಾನವನ್ನು ಸ್ಮರಿಸಿದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಕವಿತಾ ಮಾತನಾಡಿ, ದೇಶವನ್ನು ರಕ್ಷಿಸುತ್ತಿರುವ ಯೋಧರ ಸೇವೆ ಅವಿಸ್ಮರಣೀಯ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರನ್ನು ಸದಾ ಸ್ಮರಿಸಿ ಗೌರವಿಸಬೇಕು ಎಂದರು.

ಲಯನ್ಸ್ ಕಾರ್ಯದರ್ಶಿ ಪಿ. ಸೋಮಣ್ಣ, ಖಜಾಂಚಿ ಮಧುಕರ್ ಶೇಟ್, ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್, ವಲಯಾಧ್ಯಕ್ಷ ಮೋಹನ್ ಕುಮಾರ್, ಪ್ರಮುಖರಾದ ನಟರಾಜ್ ಕೆಸ್ತೂರ್, ಕೆ.ಕೆ. ದಾಮೋದರ್, ಮುರಗೇಶ್, ಕಮಲಾ ಮುರುಗೇಶ್, ಸಂಗೀತಾ ಮೋಹನ್ ದಾಸ್, ಮಧುಕರ್ ಕೆ., ಸತೀಶ್ ರೈ, ಮೋಹನದಾಸ್, ಉಮೇಶ್ ನಾಯ್ಕ, ಸಂತೋಷ್ ಅಣ್ವೇಕರ್ ಹಾಜರಿದ್ದು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ಪ್ರತಿನಿಧಿ ಪತ್ರಿಕೆ, ತಾಲೂಕು ಪತ್ರಕರ್ತರ ಸಂಘ, ನಗರ ಪತ್ರಕರ್ತರ ಸಂಘ, ರೋಟರಿ ಸಂಸ್ಥೆ, ಕಾಲೇಜು ಆಡಳಿತ ಮಂಡಳಿಯ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಹೆಚ್.ಎನ್. ರಾಜು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜೀ ಸೈನಿಕ ಹವಾಲ್ದಾರ್ ಅಜಿತ್‌ಕುಮಾರ್ ಭಾಗವಹಿಸಿ ಮಾತನಾಡಿ, ಕಾರ್ಗಿಲ್ ಯುದ್ಧ ಸಂದರ್ಭದ ಚಿತ್ರಣಗಳನ್ನು ವಿದ್ಯಾರ್ಥಿಗಳೆದುರು ತೆರೆದಿಟ್ಟರು. ಯುವ ಜನಾಂಗ ದೇಶ ರಕ್ಷಣೆಯ ಕಾರ್ಯಕ್ಕೆ ಸದಾ ಸಿದ್ಧರಿರಬೇಕು. ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಮಾಜಿ ಸೈನಿಕ ಅಜಿತ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.