ಶನಿವಾರಸಂತೆ, ಜು. ೨೮: ಸಮೀಪದ ನಂದಿಗುAದ ಗ್ರಾಮದ ಕಾಫಿ ತೋಟಗಳಲ್ಲಿ ಇದ್ದ ಚಿಕ್ಕ ಚಿಕ್ಕ ಗಂಧದ ಮರಗಳನ್ನು ಕಳ್ಳರು ಕತ್ತರಿಸಿ, ಕದ್ದು ಒಯ್ದಿದ್ದಾರೆ. ಮರಕ್ಕೆ ಹಬ್ಬಿಸಿದ್ದ ಕಾಳುಮೆಣಸಿನ ಬಳ್ಳಿಯನ್ನು ಎಳೆದು ಹಾಕಿದ್ದಾರೆ ಎಂದು ಬೆಳೆಗಾರರಾದ ಗುರುಪ್ರಸಾದ್, ತಿಮ್ಮೇಗೌಡ, ಶಶಿಕುಮಾರ್, ಶೋಭಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಗಳ್ಳರ ದೆಸೆಯಿಂದ ಗಂಧದ ಮರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗದು. ಮಳೆ ಹಾನಿಯ ಜತೆಗೆ ಮರಗಳ ಹಾನಿಯೂ ಆಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತು ಮರಗಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಲಿ ಎಂದು ಗುರುಪ್ರಸಾದ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.