ಮಡಿಕೇರಿ, ಜು. ೨೮: ಪ್ರಸಕ್ತ ಸಾಲಿನಲ್ಲಿ ರಂಗಭೂಮಿ ಡಿಪ್ಲೊಮಾ ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ಪ್ರತಿ ದಿನ ಸಂಜೆ ೫.೩೦ ರಿಂದ ರಾತ್ರಿ ೯ ಗಂಟೆವರೆಗೆ ನಡೆಯಲಿದೆ.

ವಯೋಮಿತಿ ೧೬ ರಿಂದ ೩೦ ವರ್ಷ, ಅರ್ಹ ಅಭ್ಯರ್ಥಿಗಳು ನಟನ ರಂಗಶಾಲೆಯ ಕಚೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆ ಮೂಲಕ ಕಚೇರಿಗೆ ತಲುಪಿಸಬೇಕು. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು.

ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಆಗಸ್ಟ್ ೭ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ತಿತಿತಿ.ಟಿಚಿಣಚಿಟಿಚಿmಥಿsuಡಿu.oಡಿg ವಿಳಾಸ ನಟನ ರಂಗಶಾಲೆ, ರಾಮಕೃಷ್ಣ ನಗರ, ಕೆ ಬ್ಲಾಕ್ ಮೈಸೂರು-೫೭೦೦೨೨. ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗೆ ೭೨೫೯೫೩೭೭೭೭, ೯೪೮೦೪೬೮೩೨೭ ಹಾಗೂ ೯೮೪೫೫೯೫೫೦೫ನ್ನು ಸಂಪರ್ಕಿಸಬಹುದು.