ಚೆಟ್ಟಳ್ಳಿ, ಜು. ೨೮: ಚೆಟ್ಟಳ್ಳಿ-ಮಡಿಕೇರಿಯನ್ನು ಸಂಪರ್ಕಿಸುವಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ತಡೆ ಗೋಡೆ ದಿನೇ ದಿನೇಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯ ರಸ್ತೆ ಸಂಪರ್ಕಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳು ಬೇಜವಬ್ದಾರಿ ತನದಿಂದ ರಸ್ತೆ ಬದಿಯಲ್ಲಿ ನಿರ್ಮಿಸಿದ ಈ ತಡೆಗೋಡೆ ನಿರ್ಮಾಣದ ಹಂತದಲ್ಲೇ ಕುಸಿಯಿತು. ಈ ಕಳಪೆ ಕಾಮಗಾರಿಯನ್ನು ಮರೆಮಾಚಲು ಹಲವು ಪ್ರಯತ್ನಗಳನ್ನು ಮಾಡಿದರೂ ಫಲಕಾರಿಯಾಗಲಿಲ್ಲ. ರಸ್ತೆ ಕುಸಿಯುವ ಭೀತಿಯಿಂದ ಕಬ್ಬಿಣದ ಸಲಾಕೆಯಲ್ಲಿ ಕಲ್ಲುಗಳನ್ನು(ಮೊದಲ ಪುಟದಿಂದ) ಜೋಡಿಸುವ ನೂತನ ತಂತ್ರಜ್ಞಾನದ ಗೇಬಿಯನ್ನ್ ಮಾದರಿಯ ತಡೆಗೋಡೆಯನ್ನು ನಿರ್ಮಿಸಲು ಇರ್ಟಿಯ ಗುತ್ತಿಗೆದಾರರಿಗೆ ಕೆಲಸ ನೀಡಲಾಯಿತು. ಮೂರು ನಾಲ್ಕು ದಿನಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾದರೂ ಅದು ಕೂಡ ಫಲಕಾರಿಯಾಗಲಿಲ್ಲ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಹಾಗೂ ವೈಜ್ಞಾನಿಕ ಮಾದರಿಯಲ್ಲಿ ತಡೆಗೋಡೆ ನಿರ್ಮಿಸದ ಕಾರಣ ಗೇಬಿಯನ್ ತಡೆಗೋಡೆಯ ಕೆಳಬದಿಯ ಕಲ್ಲುಗಳು ಜಾರತೊಡಗಿವೆ. ಮತ್ತೊಂದೆಡೆ ನಿರ್ಮಿಸಿದ ತಡೆಗೋಡೆಯಲ್ಲಿ ಬಿರುಕು ಬಿಟ್ಟಿದೆ. ಸ್ಥಳೀಯರು ಹಾಗೂ ವಕೀಲರಾದ ಕಡೇಮಾಡ ವಿನ್ಸಿ ಅಪ್ಪಯ್ಯ ಅವರು ಸಂಬAಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. -ಕರುಣ್ ಕಾಳಯ್ಯ