ಗುಡ್ಡೆಹೊಸೂರು, ಜು. ೨೮: ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿ ಮೂರು ಕಿ.ಮೀ. ಗೆ ಡಾಂಬರೀಕರಣ ಮಾಡಲಾಗಿತ್ತು. ಗುಡ್ಡೆಹೊಸೂರು ವೃತ್ತದಿಂದ ೩೦೦ ಮೀ.ಗೆ ಎರಡು ಬದಿಗೆ ಇಂಟರ್‌ಲಾಕ್ ಅಳವಡಿಸಲು ಉಪಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಒಂದು ಬದಿಗೆ ಮಾತ್ರ ಅಳವಡಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯ ಬಿ.ಎಂ.ಪ್ರದೀಪ್ ಹಲವಾರು ಬಾರಿ ಗುತ್ತಿಗೆದಾರರಲ್ಲಿ ಕೋರಿಕೊಂಡರು ಪ್ರಯೋಜನವಾಗಲಿಲ್ಲ. ಎಂದು ಬಿ.ಎಂ. ಪ್ರದೀಪ್ ಮತ್ತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ. ಗ್ರಾಮಸ್ಥರು ಒತ್ತಾಯಿಸಿದ್ದಾರೆ.