ಮಡಿಕೇರಿ, ಜು. ೨೮: ಕೊಡವ ಜನಾಂಗ ಕೊಡಗಿನ ಆದಿ ಮೂಲನಿವಾಸಿ ಜನಾಂಗವಾಗಿದ್ದು, ಪಶ್ಚಿಮಘಟ್ಟ ಬೆಟ್ಟಸಾಲುಗಳ, ಅರಣ್ಯ ಪ್ರದೇಶದಲ್ಲಿ ಮಾನವ ಉತ್ಪತ್ತಿಯ ಕಾಲದಿಂದಲೇ, ಉಗುರು, ಬೆರಳುಗಳಿಂದ ಬೆಟ್ಟ ಗುಡ್ಡಗಳನ್ನು ಅಗೆದು ಬಗೆದು ಬದುಕು ಕಟ್ಟಿಕೊಂಡ ಬುಡಕಟ್ಟು ಜನಾಂಗ. ಬುಡಕಟ್ಟು ಸಂಸ್ಕೃತಿಯು ರಕ್ತದಲ್ಲಿಯೇ ಇದೆ. ಸಂವಿಧಾನಬದ್ಧವಾಗಿ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ, ಅದನ್ನು ಆದಷ್ಟು ಬೇಗ ನೀಡುವಂತಾಗಬೇಕು ಎಂದು ಕೊಡವ ನ್ಯಾಶನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅಭಿಪ್ರಾಯಿಸಿದರು.

ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ೮ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರು ಹುಟ್ಟಿನಿಂದಲೇ ಬುಡಕಟ್ಟು ಬದುಕನ್ನು ಆದಿಯುಗದಿಂದ ಇಂದಿನವರೆಗೂ ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ನಮ್ಮ ಸಂಪ್ರದಾಯ ಆಚರಣೆಗಳು, ಬದುಕಿನ ಶೈಲಿಯೇ ಸಾಕ್ಷಿ ಇದಕ್ಕಿಂತ ಹೆಚ್ಚಿನ ಸಾಕ್ಷಿಯ ಅಗತ್ಯವಿಲ್ಲ. ದೇಶ ಹಾಗೂ ಪ್ರಪಂಚದಾದ್ಯAತ ಈಗಾಗಲೇ ಹಲವಾರು ಬುಡಕಟ್ಟು ಜನಾಂಗಗಳನ್ನು ಆಯಾ ಸರ್ಕಾರಗಳು ಗುರುತಿಸಿ ಸಾಂವಿಧಾನಿಕ ಭದ್ರತೆಯನ್ನು ನೀಡಿದೆ. ಅದರಂತೆ ಕೊಡವರೂ ಕೂಡ ಇದಕ್ಕೆ ಅರ್ಹರಾಗಿದ್ದು ಸರ್ಕಾರ ಕೂಡಲೇ ಈ ಕುರಿತು ಅಗತ್ಯ ನಿರ್ಧಾರಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷೆ ಕುಲ್ಲಚಂಡ ವಿನುತಕೇಸರಿ ಅವರು, ಸದಾ ಸಮಾಜಮುಖಿ ಚಿಂತನೆಯೊAದಿಗೆ, ಜನಾಂಗದ ಸೇವೆಗೆ ಸಂಘಟನೆಯು ತುಡಿಯುತಿದ್ದು, ಸರ್ವರ ಸಹಕಾರವೇ ನಮಗೆ ಶ್ರೀರಕ್ಷೆಯಾಗಿದೆ. ಇದಕ್ಕೆ ಕಳೆದ ಮೂರು ವರ್ಷಗಳಿಂದ ನಮ್ಮ ಸಂಘಟನೆ ಬೆಳೆದ ರೀತಿಯೇ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕರೂ ಆಗಿರುವ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಬುಡಕಟ್ಟು ಎಂದರೆ ಪ್ರಕೃತಿಯ ಆದಿಯಿಂದಲೇ ಬಂದವರು, ಕೊಡವರೂ ಕೂಡ ಬುಡಕಟ್ಟು ಪರಂಪರೆಯನ್ನು ರಕ್ತದಲ್ಲಿಯೇ ಪಡೆದವರು, ಇದಕ್ಕೆ ಸರ್ಕಾರ ಸಾಂವಿಧಾನಿಕ ಭದ್ರತೆ ನೀಡಬೇಕು, ಇದಕ್ಕಾಗಿ ಹೋರಾಡುವವರಿಗೆ ಸಂಘಟನೆಯು ಸದಾ ಜೊತೆಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲಂದಿರ ಜೋಯಪ್ಪ, ಕನ್ನಿಕಂಡ ಲಕ್ಷ್ಮಣ, ಕನ್ನಿಕಂಡ ಇಂದು ಮೊಣ್ಣಪ್ಪ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.

ಸದಸ್ಯೆ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಸ್ವಾಗತಿಸಿ, ಕುಯ್ಮಂಡ ಮಮತಮೇದಪ್ಪ ನಿರೂಪಿಸಿ, ಕಾರ್ಯದರ್ಶಿ ಗಿರೀಶ್ ಭೀಮಯ್ಯ ವಂದಿಸಿದರು. ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಫೇಸ್ಬುಕ್ ಲೈವ್ ನಡೆಸಿಕೊಟ್ಟರು.